Bengaluru 22°C
Ad

ಐಸಿಸಿಯಲ್ಲಿ ಪಾಕಿಸ್ತಾನದ ಮೊದಲ ಅಂಪೈರ್ ಆಗಿ ಚರಿತ್ರೆ ಸೃಷ್ಟಿಸಿದ ಮಹಿಳೆ

ಐಸಿಸಿ ಇಂಟರ್‌ನ್ಯಾಶನಲ್ ಪ್ಯಾನೆಲ್ ಆಫ್ ಡೆವಲಪ್‌ಮೆಂಟ್ ಅಂಪೈರ್‌ಗಳಲ್ಲಿ ಸ್ಥಾನ ಪಡೆದ ಮೊದಲ ಪಾಕಿಸ್ತಾನಿ ಮಹಿಳೆಯಾಗಿ ಸಲೀಮಾ ಇಮ್ತಿಯಾಜ್ ಹೊರಹೊಮ್ಮಿದ್ದಾರೆ. ಈ ಮಾಹಿತಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ (ಸೆಪ್ಟೆಂಬರ್ 15) ಹಂಚಿಕೊಂಡಿದೆ.

ಐಸಿಸಿ ಇಂಟರ್‌ನ್ಯಾಶನಲ್ ಪ್ಯಾನೆಲ್ ಆಫ್ ಡೆವಲಪ್‌ಮೆಂಟ್ ಅಂಪೈರ್‌ಗಳಲ್ಲಿ ಸ್ಥಾನ ಪಡೆದ ಮೊದಲ ಪಾಕಿಸ್ತಾನಿ ಮಹಿಳೆಯಾಗಿ ಸಲೀಮಾ ಇಮ್ತಿಯಾಜ್ ಹೊರಹೊಮ್ಮಿದ್ದಾರೆ. ಈ ಮಾಹಿತಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ (ಸೆಪ್ಟೆಂಬರ್ 15) ಹಂಚಿಕೊಂಡಿದೆ.

ಸಲೀಮಾ ಇಮ್ತಿಯಾಜ್ ಅವರು ಐಸಿಸಿ ಅಂಪೈರ್ ಆಗಿ ಆಯ್ಕೆಯಾದ ಕಾರಣ ಇನ್ಮುಂದೆ ಅವರು ಮಹಿಳಾ ದ್ವಿಪಕ್ಷೀಯ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಐಸಿಸಿ ಮಹಿಳಾ ಈವೆಂಟ್‌ಗಳಲ್ಲಿ ಅಫಿಶಿಯೇಟ್ ಮಾಡಲು ಅರ್ಹರಾಗಿರುತ್ತಾರೆ.

ಸಲೀಮಾ ಇಮ್ತಿಯಾಜ್ ಮಾತನಾಡುತ್ತಿರುವ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ. ‘ಇದು ಕೇವಲ ನನ್ನ ಗೆಲುವಲ್ಲ, ಇದು ಪಾಕಿಸ್ತಾನದ ಪ್ರತಿಯೊಬ್ಬ ಮಹಿಳಾ ಕ್ರಿಕೆಟಿಗರು ಮತ್ತು ಅಂಪೈರ್‌ಗಳ ವಿಜಯವಾಗಿದೆ. ನನ್ನ ಯಶಸ್ಸು ಆಟದಲ್ಲಿ ತಮ್ಮ ಛಾಪು ಮೂಡಿಸುವ ಕನಸು ಕಾಣುವ ಅಸಂಖ್ಯಾತ ಮಹಿಳೆಯರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಸಲೀಮಾ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಲೀಮಾ ಇಮ್ತಿಯಾಜ್, ಅಂತರಾಷ್ಟ್ರೀಯ ಮಟ್ಟದಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಸ್ವಂತ ಕನಸಾಗಿತ್ತು, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಲ್ಲಿ ನನಗೆ ಅವಕಾಶಗಳು ಬಂದವು, ಆದರೆ ಉನ್ನತ ಮಟ್ಟದಲ್ಲಿ ಕೆಲಸ ಮಾಡುವುದು ಯಾವಾಗಲೂ ಅಂತಿಮ ಗುರಿಯಾಗಿದೆ’ ಎಂದು ಹೇಳಿದರು.

ವೃತ್ತಿಯಲ್ಲಿ ವೇಗದ ಬೌಲರ್ ಆಗಿರುವ ಸಲೀಮಾ ಇಮ್ತಿಯಾಜ್ ಅವರ ಪುತ್ರಿ ಕೈನಾತ್, 16 ಏಕದಿನ ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಇದಲ್ಲದೇ, ಕೈನಾಟ್ ಟಿ20 ಅಂತರಾಷ್ಟ್ರೀಯ 12 ಇನ್ನಿಂಗ್ಸ್‌ಗಳಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Ad
Ad
Nk Channel Final 21 09 2023