ಮುಂಬೈ: ವಿಶ್ವಕಪ್ ಬಳಿಕ ಕಿಂಗ್ ಕೊಹ್ಲಿ ವಿಶ್ರಾಂತಿಗೆ ಜಾರಿದ್ದಾರೆ. ಮುಂದೆ ಯಾವಾಗ ಅಖಾಡಕ್ಕೆ ಇಳಿಯುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ ವಿರಾಟ್ 2024ರ ಟಿ20 ವಿಶ್ವಕಪ್ ಆಡ್ತಾರಾ ? ಇಲ್ವಾ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಬಿಸಿಸಿಐ ಈಗಾಗಲೇ ಕಿಂಗ್ ಕೊಹ್ಲಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಕಿಂಗ್ ಕೊಹ್ಲಿ ಅತ್ಯಾಪ್ತ ಎಬಿಡಿ ವಿಲಿಯರ್ಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿಯ ಬೆಸ್ಟ್ ಫ್ರೆಂಡ್. ಇಬ್ಬರ ಸ್ನೇಹಕ್ಕೆ ದಶಕಕ್ಕೂ ಅಧಿಕ ಸಂಬಂಧವಿದೆ. ಕೊಹ್ಲಿ ಪಾಲಿಗೆ ಎಬಿಡಿ ಓರ್ವ ಫ್ರೆಂಡ್ ಮಾತ್ರವಲ್ಲ, ನಂಬಿಗಸ್ಥ ವ್ಯಕ್ತಿ ಕೂಡ. ಇದೀಗ ಕೊಹ್ಲಿ ನಿವೃತ್ತಿ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದು, ಕ್ರಿಕೆಟ್ ಲೋಕವನ್ನ ಅಚ್ಚರಿಗೆ ತಳ್ಳಿದ್ದಾರೆ.
ಹೌದು. . . “ವಿರಾಟ್ ಕೊಹ್ಲಿ ಅವರನ್ನ ಇಲ್ಲಿಗೆ ಕರೆಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಬಹುಶಃ ಇದು ಅವರ ಅಂತಿಮ ಸೀಸನ್ ಆಗಬಹುದು. ಹಾಗಾಗಿ ಕೊಹ್ಲಿಗೆ ಅದ್ಭುತವಾದ ವಿದಾಯ ನೀಡಲು ಎದುರು ನೋಡುತ್ತಿದ್ದೇವೆ” ಎಂದು ಎಬಿಡಿ ವಿಲಿಯರ್ಸ್ ಹೇಳಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಆಫ್ರಿಕಾ ಪ್ರವಾಸವೇ ಕೊಹ್ಲಿ ಅವರ ಕೊನೆಯಾ ಪಂದ್ಯವಾಗುತ್ತಾ ? ಎಂಬುದು ಸದ್ಯ ಪ್ರಶ್ನೆಯಾಗಿದೆ.