News Karnataka Kannada
Sunday, April 28 2024
ಕ್ರೀಡೆ

ಮ್ಯಾಕ್ಸ್​ವೆಲ್ ಆಟಕ್ಕೆ ಕೊಹ್ಲಿ ಕ್ಲೀನ್ ಬೌಲ್ಡ್: ಇದೇ ಖುಷಿಗೆ ಏನಂದ್ರು ಗೊತ್ತ ಕಿಂಗ್ ?

Ckrht
Photo Credit : News Kannada

 ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎಬ್ಬಿಸಿದ ಸುನಾಮಿಗೆ ಇಡೀ ಕ್ರಿಕೆಟ್ ಲೋಕವೇ ದಂಗಾಗಿ ಹೋಗಿದೆ. ವಿರಾಟ್ ಕೊಹ್ಲಿ ಕೂಡ ಆಶ್ಚರ್ಯಚಕಿತರಾಗಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮ್ಯಾಕ್ಸ್‌ವೆಲ್​ರನ್ನು ಹಾಡಿ ಹೊಗಳಿದ್ದಾರೆ.

ಮ್ಯಾಕ್ಸ್‌ವೆಲ್ ಕೇವಲ 128 ಎಸೆತಗಳನ್ನು ಎದುರಿಸಿ 21 ಬೌಂಡರಿ, 10 ಸಿಕ್ಸರ್‌ಗಳ ನೆರವಿನಿಂದ ಅಜೇಯ 201 ರನ್ ಸಿಡಿಸಿದರು. ಅಲ್ಲದೆ 8ನೇ ವಿಕೆಟ್‌ಗೆ ಪ್ಯಾಟ್ ಕಮಿನ್ಸ್ ಜೊತೆ 202 ರನ್‌ಗಳ ಜೊತೆಯಾಟವನ್ನು ನಡೆಸಿದರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹೊಗಳಿ ವಿಶೇಷವಾದ ಕಾಮೆಂಟ್ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮ್ಯಾಕ್ಸ್‌ವೆಲ್ ಅವರ ಫೋಟೋವನ್ನು ಹಂಚಿಕೊಂಡಿರುವ ಕೊಹ್ಲಿ, ‘ನಿನ್ನಿಂದ ಮಾತ್ರ ಇದು ಸಾಧ್ಯ’ ಎಂದು ಬರೆದುಕೊಂಡಿದ್ದಾರೆ.

ಮ್ಯಾಕ್ಸ್‌ವೆಲ್ ಅವರ ಸಿಡಿಲಬ್ಬರ್ ಇನ್ನಿಂಗ್ಸ್ ನೋಡಿದ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಮೊಹಮ್ಮದ್ ಕೈಫ್, ಪಠಾಣ್, ವಾಸಿಂ ಅಕ್ರಮ್ ಅವರಂತಹ ದಿಗ್ಗಜರು ತಮ್ಮ ಕ್ರಿಕೆಟ್ ಜೀವನದಲ್ಲಿ ಇಂತಹ ಇನ್ನಿಂಗ್ಸ್ ನೋಡಿರಲಿಲ್ಲ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು