ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ತಮಗೆ ಬೆಳ್ಳಿ ಪದಕ ಸಿಗಬೇಕು ಎಂದು ಆಗ್ರಹಿಸಿ ವಿನೇಶ್ ಪೋಗಟ್ ಸಲ್ಲಿಕೆ ಮಾಡಿರುವ ಅರ್ಜಿಯ ತೀರ್ಪನ್ನು ಜಾಗತಿಕ ಕ್ರೀಡಾ ನ್ಯಾಯಮಂಡಳಿ ಆಗಸ್ಟ್ 16ಕ್ಕೆ ಮುಂದೂಡಿಕೆ ಮಾಡಿದೆ. ಈ ಕೇಸ್‌ನಲ್ಲಿ ವಿಚಾರಣೆ ಮುಗಿದ ಬಳಿಕ ತೀರ್ಪನ್ನು ಮೂರನೇ ಬಾರಿಗೆ ಮುಂದೂಡಿಕೆ ಮಾಡಿದಂತಾಗಿದೆ.
ವಿನೇಶ್ ಫೋಗಟ್ ಅವರ ಅರ್ಜಿಯ ತೀರ್ಪನ್ನು ಕ್ರೀಡೆಗಾಗಿ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಮತ್ತಷ್ಟು ವಿಳಂಬ ಮಾಡುವುದಾಗಿ ತಿಳಿಸಿದೆ. ಈ ವಿಷಯದ ಬಗ್ಗೆ ಕ್ರೀಡಾ ನ್ಯಾಯಾಲಯವು ಮೂರನೇ ಬಾರಿಗೆ ವಿಸ್ತರಣೆಯನ್ನು ಕೇಳಿದೆ. ಫೋಗಟ್ ಮೂಲತಃ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ತನ್ನ ಅನರ್ಹತೆಯ ಕುರಿತಾಗಿ ಪ್ರಶ್ನೆ ಮಾಡಿದ್ದರು.ಮಹಿಳೆಯರ 50 ಕೆಜಿ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ಮನವಿ ಮಾಡಿದ್ದರು.
Ad