ಒಲಿಂಪಿಕ್ಸ್ ಫೈನಲ್ಸ್‌ನಿಂದ ವಿನೇಶ್ ಫೋಗಟ್ ಅನರ್ಹತೆ ವಿಚಾರವಾಗಿ ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಕುಸ್ತಿ ಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ವಜಾಗೊಳಿಸಿದೆ. ವಿನೇಶ್ ಫೋಗಟ್ ಮಿತಿಗಿಂತ ಸುಮಾರು 100 ಗ್ರಾಂ ತೂಕ ಹೆಚ್ಚಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಒಲಿಂಪಿಕ್ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು, ಇದರಿಂದ ವಿನೇಶ್ ಫೋಗಟ್ ಚಿನ್ನದ ಪದಕ ಗೆದ್ದು ಬರಲಿ ಎಂದು ಹಾರೈಸಿದ್ದ ಕೋಟ್ಯಂತರ ಮಂದಿಗೂ ಈ ಕೆಟ್ಟ ಸುದ್ದಿಯನ್ನು ಅರಗಿಸಿಕೊಳ್ಳಲು ಆಗಿರಲಿಲ್ಲ. ಆದರೆ ಇದೀಗ ಇನ್ನೂ ಸಿಎಎಸ್ ದೊಡ್ಡ ಶಾಕ್ ನೀಡಿದೆ.
Ad