ಪ್ಯಾರಿಸ್: ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024ರ ಕುಸ್ತಿ ಸ್ಪರ್ಧೆಯ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಜಪಾನ್‌ನ ಯುಯಿ ಸುಸಾಕಿ ಅವರನ್ನು 16ನೇ ಸುತ್ತಿನಲ್ಲಿ ಸೋಲಿಸಿದ್ದಾರೆ.
ಸುಸಾಕಿ ವಿಶ್ವ ಚಾಂಪಿಯನ್ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದು, ಇದೀಗ ವಿನೇಶ್ ಫೋಗಟ್ ಮುಂದೆ ಮಂಡಿಯೂರಿದ್ದಾರೆ. ಇಂದು ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ವಿನೇಶ್ ಪೋಗಟ್ ಹಾಗೂ ಜಪಾನ್ ನ ನಂಬರ್.1 ಕುಸ್ತಿ ಪಟು ಯಿ ಸುಸಾಕಿ ನಡುವೆ ನಡೆಯಿತು. ಈ ಪಂದ್ಯಾವಳಿಯಲ್ಲಿ ಭಾರತದ ವಿನೇಶ್ ಪೋಗಟ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
3-2 ಅಂತರದಿಂದ ಭಾರತದ ವಿನೇಶ್ ಪೋಗಟ್ ಅವರು ಜಪಾನ್ ನ ಯಿ ಸುಸಾಕಿ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕ್ವಾಟರ್ ಫೈನಲ್ ಪ್ರವೇಶಿಸಿರುವಂತ ಅವರು ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವುದು ಫಿಕ್ಸ್ ಆದಂತೆ ಆಗಿದೆ.