Bengaluru 28°C

ವಿನೇಶ್ ಫೋಗಟ್ ಹುಟ್ಟೂರಿನಲ್ಲಿ ಚಿನ್ನದ ಪದಕ ಹಾಕಿ ಅದ್ದೂರಿ ಸ್ವಾಗತ

 ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರು ಶನಿವಾರ ಭಾರತಕ್ಕೆ ಮರಳಿದ ಸಂದರ್ಭದಲ್ಲಿ ಭವ್ಯವಾದ ಸ್ವಾಗತವನ್ನು ಪಡೆದಿದ್ದರು. ದೆಹಲಿಯಿಂದ ಹರ್ಯಾಣದ ಬಲಾಲಿಗೆ ಹೋಗುವ ಮಾರ್ಗದಲ್ಲಿ, ವಿನೇಶ್ ಅವರನ್ನು ಹಲವಾರು ಗ್ರಾಮಗಳಲ್ಲಿ ಅಭಿಮಾನಿಗಳು ಮತ್ತು ‘ಖಾಪ್’ ಪಂಚಾಯತ್‌ಗಳು ಸನ್ಮಾನಿಸಿದ್ದಾರೆ. 135 ಕಿಮೀ ದೂರದ ಪ್ರಯಾಣಕ್ಕೆ ಶನಿವಾರ ಸುಮಾರು 13 ಗಂಟೆಗಳನ್ನು ತೆಗೆದುಕೊಳ್ಳಬೇಕಾಯಿತು.

ಹೊಸದಿಲ್ಲಿ: ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರು ಶನಿವಾರ ಭಾರತಕ್ಕೆ ಮರಳಿದ ಸಂದರ್ಭದಲ್ಲಿ ಭವ್ಯವಾದ ಸ್ವಾಗತವನ್ನು ಪಡೆದಿದ್ದರು. ದೆಹಲಿಯಿಂದ ಹರ್ಯಾಣದ ಬಲಾಲಿಗೆ ಹೋಗುವ ಮಾರ್ಗದಲ್ಲಿ, ವಿನೇಶ್ ಅವರನ್ನು ಹಲವಾರು ಗ್ರಾಮಗಳಲ್ಲಿ ಅಭಿಮಾನಿಗಳು ಮತ್ತು ‘ಖಾಪ್’ ಪಂಚಾಯತ್‌ಗಳು ಸನ್ಮಾನಿಸಿದ್ದಾರೆ. 135 ಕಿಮೀ ದೂರದ ಪ್ರಯಾಣಕ್ಕೆ ಶನಿವಾರ ಸುಮಾರು 13 ಗಂಟೆಗಳನ್ನು ತೆಗೆದುಕೊಳ್ಳಬೇಕಾಯಿತು.


ವಿನೇಶ್ ಅವರ ಹುಟ್ಟೂರು ಬಲಾಲಿಯಲ್ಲಿ ಅದ್ದೂರಿ ಸ್ವಾಗತದ ಬಳಿಕ ಸಮುದಾಯದ ಹಿರಿಯರು ಚಿನ್ನದ ಪದಕ ಹಾಕಿ ಗೌರವಿಸಿದರು.ಸಮಾರಂಭದಲ್ಲಿ ನೂರಾರು ಜನರು ಭಾಗಿಯಾಗಿದ್ದರು. ನೋಟಿನ ಮಾಲೆಗಳನ್ನು ಹಾಕಿ ಅಭಿನಂದಿಸಲಾಯಿತು.


ಪದಕ ಸ್ವೀಕರಿಸಿ ಮಾತನಾಡಿದ ವಿನೇಶ್ ‘ತಮ್ಮ ಗ್ರಾಮದ ಬಲಾಲಿಯ ಮಹಿಳಾ ಕುಸ್ತಿಪಟುಗಳಿಗೆ ತರಬೇತಿ ನೀಡಿದರೆ ಮತ್ತು ನನಗಿಂತ ಹೆಚ್ಚು ಯಶಸ್ವಿಯಾದರೆ ಅದು ತನಗೆ ಹೆಮ್ಮೆಯ ವಿಷಯ’ ಎಂದರು.


Nk Channel Final 21 09 2023