ಹೊಸದಿಲ್ಲಿ: ಕುಸ್ತಿ ಪಟುಗಳಾದ ವಿನೇಶ್ ಫೋಗಾಟ್ ಮತ್ತು ಬಜರಂಗ್ ಪೂನಿಯಾ ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅ.5ರಂದು ನಡೆಯಲಿರುವ ಹರಿಯಾಣ ವಿಧಾ ನ ಸಭಾ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ.
ಇಬ್ಬರು ದಿಲ್ಲಿಯಲ್ಲಿ ರಾಹುಲ್ ಗಾಂಧಿ ಅವ ರನ್ನು ಭೇಟಿ ಯಾಗಿ ಚರ್ಚಿಸಿದ್ದಾರೆ. ಜನ ನಾ ಯಕ್ ಜನತಾ ಪಕ್ಷದ ಅಮರ್ಜೀತ್ ಧಂಡ ಸ್ಪರ್ಧಿಸುತ್ತಿ ರುವ ಜುಲಾ ನಾ ಕ್ಷೇತ್ರ ದಿಂದ ವಿನೇಶ್ ಫೋಗಾಟ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತವಾಗಿದೆ.
ಇತ್ತೀಚೆಗಷ್ಟೇ ವಿನೇಶ್ ಫೋಗಾಟ್ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿಯಾಗಿ ಬೆಂಬಲ ವ್ಯಕ್ತ ಪಡಿಸಿದ್ದರು. ಬಜರಂಗ್ ಪೂನಿಯಾ ಅವರು ಬದ್ಲಿ ಕ್ಷೇತ್ರ ದಲ್ಲಿ ಅಭ್ಯ ರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
Ad