Categories: ಕ್ರೀಡೆ

ಐಪಿಎಲ್ 2024: 8 ತಂಡಗಳ ಹೊಸ ಜೆರ್ಸಿ ಅನಾವರಣ

ಮುಂಬೈ: ಮಾರ್ಚ್ 22 ರಿಂದ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) 17ನೇ ಆವೃತ್ತಿಗಾಗಿ ಈಗಾಗಲೇ 8 ತಂಡಗಳು ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ಎಂಟು ತಂಡಗಳಲ್ಲಿ 6 ತಂಡಗಳು ಈ ಹಿಂದಿನ ಜೆರ್ಸಿ ಬಣ್ಣವನ್ನೇ ಮುಂದುವರೆಸಿದರೆ, ಸನ್​ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಮಾತ್ರ ಹೊಸ ವಿನ್ಯಾಸದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ಇನ್ನು ಐಪಿಎಲ್ 2024 ಕ್ಕೂ ಮುನ್ನ ನಡೆಯುವ ಅನ್​ಬಾಕ್ಸ್​ ಕಾರ್ಯಕ್ರಮದ ಮೂಲಕ ಆರ್​ಸಿಬಿ ತನ್ನ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡವು ಈ ಬಾರಿ ಕೂಡ ನೇರಳೆ ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ ಜೆರ್ಸಿಯ ಮುಂಭಾಗದ ವಿನ್ಯಾಸಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿದೆ.

ಪಂಜಾಬ್ ಕಿಂಗ್ಸ್: ಐಪಿಎಲ್ 2023 ರಲ್ಲಿ ಫುಲ್ ರೆಡ್ ಬಣ್ಣದಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ಪಡೆ ಈ ಬಾರಿ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಕೆಂಪು ಬಣ್ಣದ ಜೊತೆ ಪಂಜಾಬ್ ಈ ಬಾರಿ ಅಲ್ಲಲ್ಲಿ ಹಳದಿ ಬಣ್ಣವನ್ನು ಕೂಡ ವಿನ್ಯಾಸದಲ್ಲಿ ಬಳಸಿದೆ. ಜೆರ್ಸಿಯ ಮುಂಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ದೊಡ್ಡದಾದ ಸಿಂಹದ ಲೋಗೋವನ್ನು ಈ ಬಾರಿ ವಿನ್ಯಾಸಗೊಳಿಸಲಾಗಿಲ್ಲ. ಅಷ್ಟೇ ಅಲ್ಲದೆ ಈ ಬಾರಿ ಫುಲ್ ರೆಡ್ ಬದಲಿಗೆ ಕೆಂಪು ಟಿ ಶರ್ಟ್ ಜೊತೆ ನೀಲಿ ಪ್ಯಾಂಟ್​​ನೊಂದಿಗೆ ಪಂಜಾಬ್ ಕಿಂಗ್ಸ್ ಕಣಕ್ಕಿಳಿಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ಸಣ್ಣ ಪುಟ್ಟ ಚೇಂಜ್ ಮಾಡಿದ್ದು ಬಿಟ್ಟರೆ, ಜೆರ್ಸಿಯಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.

ಮುಂಬೈ ಇಂಡಿಯನ್ಸ್​: ಕಳೆದ ಸೀಸನ್​​ನಂತೆ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ರಾಯಲ್ ಬ್ಲೂ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಸಲ ಜೆರ್ಸಿ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಅದರಂತೆ ಜೆರ್ಸಿ ಮೇಲೆ M ಆಕಾರವನ್ನು ವಿನ್ಯಾಸಗೊಳಿಸಿದೆ.

ರಾಜಸ್ಥಾನ್ ರಾಯಲ್ಸ್​: ಪಿಂಕ್ ಸಿಟಿಯನ್ನು ಪ್ರತಿನಿಧಿಸುವ ರಾಜಸ್ಥಾನ್ ರಾಯಲ್ಸ್ ಈ ಸಲ ಕೂಡ ಪಿಂಕ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ತೊಳ್ಭಾಗದಲ್ಲಿ ನೀಲಿ ಬಣ್ಣ ನೀಡಲಾಗಿರುವ ಈ ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಇದರ ಹೊರತಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್​: ಯೆಲ್ಲೊ ಆರ್ಮಿ ಖ್ಯಾತಿಯ ಸಿಎಸ್​ಕೆ ತಂಡವು ಕಳೆದ ಬಾರಿಯಂತೆ ಈ ಸಲ ಕೂಡ ಹಳದಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಐಪಿಎಲ್ 2023 ರ ಸಿಎಸ್​ಕೆ ಜೆರ್ಸಿಗೆ ಹೋಲಿಸಿದರೆ, ಈ ಬಾರಿ ಕೂಡ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.

ಗುಜರಾತ್ ಟೈಟಾನ್ಸ್​: ಶುಭ್​ಮನ್ ಗಿಲ್ ಮುನ್ನಡೆಸಲಿರುವ ಗುಜರಾತ್ ಟೈಟಾನ್ಸ್ ತಂಡ ಕೂಡ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. GT ತಂಡ ಈ ಬಾರಿ ಕೂಡ ಈ ಹಿಂದಿನ ಜೆರ್ಸಿ ವಿನ್ಯಾಸವನ್ನು ಮುಂದುವರೆಸಿದ್ದು, ನೂತನ ಜೆರ್ಸಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿಲ್ಲ.

ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್ ತಂಡವು ಈ ಬಾರಿ ನೂತನ ವಿನ್ಯಾಸದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಕೇಪ್ ಈಸ್ಟರ್ನ್​ ತಂಡ ಧರಿಸಿದ್ದ ಜೆರ್ಸಿ ವಿನ್ಯಾಸವನ್ನೇ ಎಸ್ಆರ್​ಹೆಚ್​ ಐಪಿಎಲ್​ಗೂ ಪರಿಚಯಿಸುತ್ತಿದೆ.

Ashitha S

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

5 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

5 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

5 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

6 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

6 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

7 hours ago