ಮೈಸೂರು: ಐಡಿಯಲ್ ಜಾವಾ ರೋಟರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಎಂ.ಎಲ್.ಅಜಯ್ ಪೃಥ್ವಿರಾಜ್ ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿದ್ದ ರಾಜ್ಯ ಮಿನಿ ಒಲಿಂಪಿಕ್ಸ್ ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
Ad
ಬಾಲಕರ 400 ಮೀಟರ್ ಮತ್ತು 600 ಮೀಟರ್ ಓಟದಲ್ಲಿ ಅಜಯ್ ಪ್ರಥಮ ಸ್ಥಾನ ಪಡೆದರು. ಇವರು ಗಾಯತ್ರಿಪುರ ನಿವಾಸಿಗಳಾದ ಎಂ.ಲಿಂಗರಾಜು ಮತ್ತು ಸಂಗೀತಾ ದಂಪತಿಯ ಪುತ್ರ. ಅಜಯ್ ಅಂತಾರಾಷ್ಟ್ರೀಯ ಅಥ್ಲೀಟ್ ರೀನಾ ಜಾರ್ಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Ad
Ad