ಪ್ಯಾರಿಸ್: ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಡಾ. ರಾಜ್ಕುಮಾರ್ ಅವರು ಹಾಡಿದ ಹಾಡು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬಾರೀ ಸದ್ದು ಮಾಡುತ್ತಿದೆ.
ಭಾರತದ ಆ್ಯತ್ಲೀಟ್‌ಗಳು ರಿಲಯನ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ಇಂಡಿಯಾ ಹೌಸ್‌ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ನೃತ್ಯಗಾರರು ಅತ್ಯಂತ ಸುಂದವಾಗಿ ಹೆಜ್ಜೆ ಹಾಕಿದ್ದಾರೆ.
ಈ ಮೂಲಕ ಕನ್ನಡ ಕಂಪು ಪ್ಯಾರಿಸ್ನಲ್ಲಿಯೂ ಮೊಳಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ವಿಶೇಷವೆಂದರೆ ಒಲಿಂಪಿಕ್ಸ್ ವೇಳೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಕೂಡ ಕರ್ನಾಟಕದವರು.
ಕಳೆದ 9 ವರ್ಷಗಳಿಂದ ಪ್ಯಾರಿಸ್ನಲ್ಲಿ ಸಂಗೀತ ಕಚೇರಿ ಸೇರಿ ಹಲವು ಸಂಸ್ಕೃತಿಯ ಕಾರ್ಯಕ್ರಮ ನಡೆಸುತ್ತಿರುವ ಕರ್ನಾಟಕ ಮೂಲದ ಭಾವನಾ ಪ್ರದ್ಯುಮ್ನ ಅವರು ಕನ್ಸರ್ವೇಟರಿ ಆಫ್ ಪ್ಯಾರಿಸ್ ಸಂಸ್ಥೆಯ ಮೂಲಕ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ನಡೆಯುವ 24 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಒಟ್ಟು 180 ಕಲಾವಿದರಿಂದ ಸಂಗೀತ, ನಾಟಕ ಕಾರ್ಯಕ್ರಮ ನಡೆಯಲಿದೆ. ರಘು ದೀಕ್ಷಿತ್ ಕೂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಇಂಡಿಯಾ ಹೌಸ್ ಪ್ಯಾರಿಸ್‌ನ ಪಾರ್ಕ್ ಡಿ ಲಾ ವಿಲೆಟ್ಟೆಯಲ್ಲಿ, ಭಾರತೀಯ ಒಲಿಂಪಿಕ್ಸ್ ಒಕ್ಕೂಟದೊಂದಿಗೆ ಸೇರಿ ಇದನ್ನು ನಿರ್ಮಾಣ ಮಾಡಲಾಗಿದೆ. ದೇಶದಿಂದ ದೂರ ಇರುವ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸಲು ಇದರ ಉದ್ದೇಶ.
https://x.com/dankchikidang/status/1821241703606472851?