Bengaluru 24°C
Ad

ರೋಹಿತ್ ಶರ್ಮಾರನ್ನು ತಬ್ಬಿಕೊಂಡ ಅಭಿಮಾನಿ; ಮನಗೆದ್ದ ಕ್ಯಾಪ್ಟನ್

Rohit (1)

ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಗಾಗಿ ಅಮೆರಿಕ ತಲುಪಿರುವ ಟೀಂ ಇಂಡಿಯಾ ಶನಿವಾರ ಮೊದಲ ಅಭ್ಯಾಸ ಪಂದ್ಯವಾಡಿದೆ. ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭ ಜಯ ಗಳಿಸಿದೆ.

ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅರ್ಷ್‌ದೀಪ್ ಸಿಂಗ್, ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ಬಾಂಗ್ಲಾ ವಿರುದ್ಧ 60 ರನ್‌ಗಳ ಜಯ ಗಳಿಸುವಲ್ಲಿ ಸಹಕಾರಿಯಾದರು.

ಹೊಸದಾಗಿ ನಿರ್ಮಿಸಲಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭದ್ರತಾ ಉಲ್ಲಂಘನೆಗೆ ಸಾಕ್ಷಿಯಾಯಿತು.

ಭಾರತ ತಂಡ ಫೀಲ್ಡಿಂಗ್ ಮಾಡುತ್ತಿದ್ದ ಸಮಯದಲ್ಲಿ ಅಭಿಮಾನಿಯೊಬ್ಬ ನಾಯಕ ರೋಹಿತ್ ಶರ್ಮಾ ಅವರ ಬಳಿ ಬಂದ. ರೋಹಿತ್ ಅವರನ್ನು ಅಪ್ಪಿಕೊಂಡಿದ್ದ. ಕೂಡಲೇ ಓಡಿ ಬಂದ ಪೊಲೀಸರು ಆತನನ್ನು ಹಿಡಿದರು. ಆದರೆ ಎಳೆದುಕೊಂಡು ಹೋಗಬೇಡಿ ಎಂದು ರೋಹಿತ್ ಪೊಲೀಸರ ಬಳಿ ಕೇಳಿಕೊಂಡರು.

Ad
Ad
Nk Channel Final 21 09 2023
Ad