Ad

2025ರ ಟೆಸ್ಟ್​ ವಿಶ್ವಕಪ್​ ಫೈನಲ್​ವರೆಗೂ ಹಿಟ್‌ ಮ್ಯಾನ್​ ನಾಯಕ: ಜಯ್​ ಷಾ ಘೋಷಣೆ

Sshah

ನವದೆಹಲಿ: ಭಾರತ ತಂಡ ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ನಲ್ಲಿ ರೋಹಿತ್​ ಶರ್ಮ ಸಾರಥ್ಯದಲ್ಲಿ ಪ್ರಶಸ್ತಿ ಜಯಿಸುವ ವಿಶ್ವಾಸವನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ವ್ಯಕ್ತಪಡಿಸಿದ್ದಾರೆ.

Ad
300x250 2

ಈ ಮೂಲಕ 2025ರ ಜೂನ್​ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್​ವರೆಗೂ ರೋಹಿತ್​ ಶರ್ಮ ಏಕದಿನ ಮತ್ತು ಟೆಸ್ಟ್​ ಮಾದರಿಯಲ್ಲಿ ಟೀಮ್​ ಇಂಡಿಯಾದ ನಾಯಕರಾಗಿ ಮುಂದುವರಿಯುವುದನ್ನು ಖಚಿತಪಡಿಸಿದ್ದಾರೆ.

‘ಟಿ20 ವಿಶ್ವಕಪ್​ ಗೆಲುವನ್ನು ನಾನು ರೋಹಿತ್​, ವಿರಾಟ್​ ಕೊಹ್ಲಿ, ರಾಹುಲ್​ ದ್ರಾವಿಡ್​ ಮತ್ತು ರವೀಂದ್ರ ಜಡೇಜಾಗೆ ಅರ್ಪಿಸಲು ಬಯಸುತ್ತೇನೆ. ಕಳೆದ ಒಂದು ವರ್ಷದಲ್ಲಿ ಐಸಿಸಿ ಟೂರ್ನಿಯಲ್ಲಿ ಇದು ನಮ್ಮ 3ನೇ ಫೈನಲ್​ ಆಗಿತ್ತು. ಕಳೆದ ವರ್ಷ ನಾವು ಏಕದಿನ ವಿಶ್ವಕಪ್​ನಲ್ಲಿ ಜನರ ಹೃದಯ ಗೆದ್ದರೂ, ಕಪ್​ ಗೆಲ್ಲಲು ವಿಫಲರಾಗಿದ್ದೆವು. ಚಾಂಪಿಯನ್ಸ್​ ಟ್ರೋಫಿ ಮತ್ತು ಡಬ್ಲ್ಯುಟಿಸಿ ಫೈನಲ್​ ನಮ್ಮ ಮುಂದಿನ ಗುರಿಗಳಾಗಿವೆ’ ಎಂದು ಜಯ್​ ಷಾ ವಿಡಿಯೋ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad