Ad

ಸಿರಾಜ್​ನನ್ನು ಕೊಂಡಾಡಿದ ತೆಲಂಗಾಣ ಸಿಎಂ : ಸರ್ಕಾರದಿಂದ ಡಬಲ್‌ ಗಿಫ್ಟ್‌

ವಿಶ್ವಕಪ್‌ ಗೆದ್ದಿರುವ ಇಂಡಿಯಾ ಟೀಂನ ಅತ್ಯತ್ತಮ ಆಟಗಾರ, ಆಲ್ರೌಂಡರ್ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರಿಗೆ ತೆಲಾಂಗಣ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ.

ಬೆಂಗಳೂರು: ವಿಶ್ವಕಪ್‌ ಗೆದ್ದಿರುವ ಇಂಡಿಯಾ ಟೀಂನ ಅತ್ಯತ್ತಮ ಆಟಗಾರ, ಆಲ್ರೌಂಡರ್ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರಿಗೆ ತೆಲಾಂಗಣ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ. ಭಾರತದ ಟಿ 20 ವಿಶ್ವಕಪ್ ಗೆಲುವಿನ ನಂತರ ಕಳೆದ ವಾರ ತಮ್ಮ ತವರು ಹೈದರಾಬಾದ್​ಗೆ ಮರಳಿದ ಸಿರಾಜ್, ಮುಖ್ಯಮಂತ್ರಿಯನ್ನು ಅವರ ನಿವಾಸದಲ್ಲಿ ಸೌಜನ್ಯದಿಂದ ಭೇಟಿಯಾದರು.

Ad
300x250 2

ಭೆಯಲ್ಲಿ, ಸಿಎಂ ರೇವಂತ್ ರೆಡ್ಡಿ ಅವರು ಸಿರಾಜ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು,ಮೊಹಮ್ಮದ್ ಸಿರಾಜ್ ನಮ್ಮ ದೇಶಕ್ಕೆ ಅಪಾರ ಹೆಮ್ಮೆ ಮತ್ತು ತೆಲಂಗಾಣ ರಾಜ್ಯಕ್ಕೆ ಹೆಚ್ಚಿನ ಗೌರವವನ್ನು ತಂದಿದ್ದಾರೆ” ಎಂದು ಮುಖ್ಯಮಂತ್ರಿ ಹೇಳಿದರು.

ಸಿರಾಜ್ ಅವರ ಸಾಧನೆಗೆ ಮೆಚ್ಚುಗೆಯ ಸಂಕೇತವಾಗಿ, ರಾಜ್ಯ ಸರ್ಕಾರವು ಸಿರಾಜ್​ಗೆ ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಬಹುಮಾನವಾಗಿ ನೀಡಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.

Ad
Ad
Nk Channel Final 21 09 2023
Ad