Bengaluru 22°C
Ad

ಟೀಮ್​ ಇಂಡಿಯಾಗೆ ಜಿಂಬಾಬ್ವೆ ತಂಡದ ವಿರುದ್ಧ 100 ರನ್​ಗಳ ಭರ್ಜರಿ ಜಯ

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆಲುವು ಸಾಧಿಸಿದೆ.

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆಲುವು ಸಾಧಿಸಿದೆ.

Ad
300x250 2

ಬರೋಬ್ಬರಿ 100 ರನ್​ಗಳಿಂದ ಕ್ಯಾಪ್ಟನ್​​ ಶುಭ್ಮನ್​ ಗಿಲ್​ ಪಡೆ ಗೆಲುವು ಸಿಕ್ಕಿದೆ. ಭಾರತ ತಂಡ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಜಿಂಬಾಬ್ವೆ 18.4 ಓವರ್​​ನಲ್ಲಿ 134 ರನ್​ಗೆ ಆಲೌಟ್​ ಆಗಿದೆ. ವೆಸ್ಲಿ ಮಾಧೆವೆರೆ 43, ಬ್ರಿಯಾನ್ ಬೆನೆಟ್ 26, ಜೊನಾಥನ್ ಕ್ಯಾಂಪ್‌ಬೆಲ್ 10, ಲ್ಯೂಕ್ ಜೊಂಗ್ವೆ 33 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಅಭಿಷೇಕ್​ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್​ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್​ಗಳ ಬೆಂಡೆತ್ತಿದ ಗಾಯಕ್ವಾಡ್​​ ಕೂಡ ಅಬ್ಬರಿಸಿದರು.

ತಾನು ಆಡಿದ 47 ಬಾಲ್​ನಲ್ಲಿ 1 ಸಿಕ್ಸರ್​​, 11 ಫೋರ್​ ಸಮೇತ 77 ರನ್​ ಗಳಿಸಿದರು. ಈ ಮೂಲಕ ಮತ್ತೆ ಗಾಯಕ್ವಾಡ್​ ಮತ್ತೆ ಫಾರ್ಮ್​ಗೆ ಬಂದರು. ಈ ಹಿಂದೆ ಗಾಯಕ್ವಾಡ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.

ಕೊನೆಗೆ ಬಂದ ರಿಂಕು ಸಿಂಗ್​ ಕೂಡ ಮಿಂಚಿದರು. ಕೇವಲ 22 ಬಾಲ್​ನಲ್ಲಿ 5 ಸಿಕ್ಸರ್​​, 2 ಫೋರ್​ ಸಮೇತ 48 ರನ್​​​ ಸಿಡಿಸಿ ಫಿನಿಶ್​ ಮಾಡಿದರು. ಕ್ಯಾಪ್ಟನ್​ ಗಿಲ್​ ಕೇವಲ 2 ರನ್​ಗೆ ಔಟಾಗಿ. ಟೀಮ್​ ಇಂಡಿಯಾ ನಿಗದಿತ 20 ಓವರ್​​ನಲ್ಲಿ 236 ರನ್​​ ಕಲೆ ಹಾಕಿತ್ತು.

Ad
Ad
Nk Channel Final 21 09 2023
Ad