Bengaluru 23°C
Ad

17 ವಿಕೆಟ್‌ ಪತನ: ಭರ್ಜರಿ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ

ಟೀಂ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನ ಒಟ್ಟು 17 ವಿಕೆಟ್‌ ಪತನಗೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಕಳೆದುಕೊಂಡರೂ ಭಾರತ 308 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ಚೆನ್ನೈ: ಟೀಂ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನ ಒಟ್ಟು 17 ವಿಕೆಟ್‌ ಪತನಗೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಕಳೆದುಕೊಂಡರೂ ಭಾರತ 308 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ಮೊದಲ ದಿನ 339 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದ ಭಾರತ ಇಂದು ಆ ಮೊತ್ತಕ್ಕೆ 37 ರನ್‌ ಸೇರಿಸಿ ಅಂತಿಮವಾಗಿ 91.2 ಓವರ್‌ಗಳಲ್ಲಿ 376 ರನ್‌ಗಳಿಗೆ ಆಲೌಟ್‌ ಅಯ್ತು. ಮೊದಲ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾಗೆ ಭಾರತದ ಬೌಲರ್‌ಗಳು ಆರಂಭದಿಂದಲೇ ಕಾಡಲು ಆರಂಭಿಸಿದರು. ಅಂತಿಮವಾಗಿ 47.1 ಓವರ್‌ಗಳಲ್ಲಿ 149 ರನ್‌ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು.

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ 23 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 81 ರನ್‌ಗಳಿಸಿತು. ಗುರುವಾರ ಔಟಾಗದೇ ಉಳಿದಿದ್ದ ಜಡೇಜಾ 86 ರನ್‌, ಅಶ್ವಿನ್‌ 113 ರನ್‌, ಆಕಾಶ್‌ ದೀಪ್‌ 17 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಮೊದಲ ಓವರ್‌ನಿಂದಲೇ ಬಾಂಗ್ಲಾದ ವಿಕೆಟ್‌ ಪತನ ಆರಂಭವಾಯಿತು. ಆರಂಭಿಕ ಆಟಗಾರ ಶಾದಂ ಇಸ್ಲಾಂ 2 ರನ್‌ ಹೊಡೆದು ಬುಮ್ರಾಗೆ ಬೌಲ್ಡ್‌ ಆದರು. ಬಾಂಗ್ಲಾ ಪರ ಶಕೀಬ್‌ ಅಲ್‌ ಹಸನ್‌ 32 ರನ್‌ , ಮೆಹ್ದಿ ಹಸನ್‌ 27 ರನ್‌, ಲಿಟ್ಟನ್‌ ದಾಸ್‌ 22 ರನ್‌ ಹೊಡೆದು ಔಟಾದರು. ಬುಮ್ರಾ 4 ವಿಕೆಟ್‌ ಕಿತ್ತರೆ, ಸಿರಾಜ್‌, ಆಕಾಶ್‌ ದೀಪ್‌, ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಪಡೆದರು.

ಮೂರು ವಿಕೆಟ್‌ ಪತನ: ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿದ್ದಾರೆ. ಯಶಸ್ವಿ ಜೈಸ್ವಾಲ್‌ 10 ರನ್‌, ರೋಹಿತ್‌ ಶರ್ಮಾ 5 ರನ್‌, ವಿರಾಟ್‌ ಕೊಹ್ಲಿ 17 ರನ್‌ ಹೊಡೆದು ಔಟಾಗಿದ್ದಾರೆ. ಶುಭಮನ್‌ ಗಿಲ್‌ ಔಟಾಗದೇ 33 ರನ್‌, ರಿಷಭ್‌ ಪಂತ್‌ ಔಟಾಗದೇ 12 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಚೇಪಾಕ್‌ ಮೈದಾನದಲ್ಲಿ 17 ವಿಕೆಟ್‌ ಪತನವಾಗಿದೆ. ಮೊದಲ ಅವಧಿಯಲ್ಲಿ 7, ಎರಡನೇ ಅವಧಿಯಲ್ಲಿ 5, ಮೂರನೇ ಅವಧಿಯಲ್ಲಿ 5 ವಿಕೆಟ್‌ ಪತನಗೊಂಡಿದೆ.

Ad
Ad
Nk Channel Final 21 09 2023