ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರನ್ನು ಟೀಮ್ ಇಂಡಿಯಾದ ದಿಗ್ಗಜ ಗೌತಮ್ ಗಂಭೀರ್ ಕೊಂಡಾಡಿದ್ದಾರೆ. ರಜತ್ ಪಾಟಿದಾರ್ ಆಡಬೇಕಿರುವುದು ಐಪಿಎಲ್ ಅಲ್ಲ, ಬದಲಿಗೆ ಟೀಮ್ ಇಂಡಿಯಾದ ಬಿಗ್ ಇನ್ನಿಂಗ್ಸ್ಗಳಲ್ಲಿ ಎಂದಿದ್ದಾರೆ.
ನನಗೆ ರಜತ್ ಪಾಟಿದಾರ್ ಎಂದರೆ ಬಹಳ ಇಷ್ಟ. ಅವರು ಆಡಬೇಕಿರುವುದು ಐಪಿಎಲ್, ಬದಲಿಗೆ ಟೀಮ್ ಇಂಡಿಯಾದ ಪರ. ಐಸಿಸಿ ಮೆಗಾ ಟೂರ್ನಿಗಳಲ್ಲಿ ಆರ್ಸಿಬಿ ತಂಡದ ಆಟಗಾರ ರಜತ್ ಪಾಟಿದಾರ್ ಬೇಕು. ಅವರ ರೀತಿಯ ಆಟಗಾರರಿಗೆ ಟೀಮ್ ಇಂಡಿಯಾ ಪರ ಆಡಲು ಅವಕಾಶ ನೀಡಬೇಕು ಎಂದು ಗೌತಮ್ ಗಂಭೀರ್ ಹೇಳಿದರು.
ರಜತ್ ಪಾಟಿದಾರ್ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲಾರ್ಧ ಸೀಸನ್ನಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. ಅರ್ಧ ಸೀಸನ್ ಬಳಿಕ ರಜತ್ ಪಾಟಿದಾರ್ ಫಾರ್ಮ್ಗೆ ಬಂದರು. ತಾನು ಆಡಿದ 13 ಇನ್ನಿಂಗ್ಸ್ನಲ್ಲಿ 395 ರನ್ ಚಚ್ಚಿದ್ರು. ಈ ಪೈಕಿ 5 ಅರ್ಧಶತಕಳು ದಾಖಲಿಸಿದರು..
ಬರೋಬ್ಬರಿ 33 ಸಿಕ್ಸರ್ಗಳು, 21 ಫೋರ್ಗಳನ್ನು ರಜತ್ ಪಾಟಿದಾರ್ ಬಾರಿಸಿದರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 175ಕ್ಕೂ ಹೆಚ್ಚಿದ್ದು, ಆವರೇಜ್ 30 ಇತ್ತು. ಮುಂದಿನ ಸೀಸನ್ಗೂ ಆರ್ಸಿಬಿ ಪಾಟಿದಾರ್ ಅವರನ್ನು ರೀಟೈನ್ ಮಾಡಿಕೊಳ್ಳಲಿದೆ ಎಂದು ತಿಳಿದು ಬಂದಿದೆ.