Bengaluru 28°C
Ad

4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌ ಅವರು ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು(ಶನಿವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಜಾಸ್ಮಿನ್​ ಪಾವೊಲಿನಿ ವಿರುದ್ಧ ಅಧಿಕಾರಯು ಗೆಲುವು ಸಾಧಿಸಿ ಮತ್ತೊಮ್ಮೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ

ಪ್ಯಾರಿಸ್‌: ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌ ಅವರು ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು(ಶನಿವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಜಾಸ್ಮಿನ್​ ಪಾವೊಲಿನಿ ವಿರುದ್ಧ ಅಧಿಕಾರಯು ಗೆಲುವು ಸಾಧಿಸಿ ಮತ್ತೊಮ್ಮೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಆವೇ ಅಂಗಣದ ಕೂಟದಲ್ಲಿ 4ನೇ ಹಾಗೂ ಹ್ಯಾಟ್ರಿಕ್​ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಒಟ್ಟಾರೆಯಾಗಿ ಇದು ಸ್ವಿಯಾಟೆಕ್​ಗೆ 5ನೇ ಗ್ರ್ಯಾನ್‌ ಸ್ಲಾಮ್‌ ಕಿರೀಟ. ಒಂದು ಟ್ರೋಫಿ ಯುಎಸ್​ ಓಪನ್​ನಲ್ಲಿ ಒಲಿದಿತ್ತು.

6-2, 6-1 ನೇರ ಸೆಟ್​ಗಳ ಹೀನಾಯ ಸೋಲು ಕಂಡರು. ಕೇವಲ 68 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತು. ಸ್ವಿಯಾಟೆಕ್‌ ರೋಲ್ಯಾಂಡ್​ ಗ್ಯಾರಸ್​ನಲ್ಲಿ ಸತತ 21 ಪಂದ್ಯಗಳ ಅಜೇಯ ಓಟ ಮುಂದುವರಿಸಿ ಪಾರಮ್ಯ ಮೆರದರು.

Ad
Ad
Nk Channel Final 21 09 2023
Ad