ಕೊಲಂಬೊ: ಇಲ್ಲಿ ಭಾನುವಾರ(ಆಗಸ್ಟ್ 4 ) ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 32 ರನ್‌ಗಳ ಜಯ ಸಾಧಿಸಿ ತವರಿನಲ್ಲಿ ಪ್ರಾಬಲ್ಯ ಮೆರೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಂಕಾ ಒಂಬತ್ತು ವಿಕೆಟ್‌ಗೆ 240 ರನ್ ಗಳಿಸಲು ಸಾಕಷ್ಟು ಹೋರಾಟ ನಡೆಸಿತು.ಗುರಿ ಬೆನ್ನಟ್ಟಿದ ಭಾರತ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರ ದಾಳಿಗೆ ಸಿಲುಕಿ ಪರದಾಡಿತು.42.2 ಓವರ್ ಗಳಲ್ಲಿ 208 ರನ್ ಗಳಿಗೆ ಆಲೌಟಾಯಿತು. ಮೊದಲ ಆರು ವಿಕೆಟ್ ಗಳನ್ನೂ ಜೆಫ್ರಿ ವಾಂಡರ್ಸೆ ಕಿತ್ತು ಗಮನ ಸೆಳೆದರು.
44 ಎಸೆತಗಳಲ್ಲಿ 64 ರನ್ ಗಳಿಸಿ ಅಬ್ಬರಿಸುತ್ತಿದ್ದ ನಾಯಕ ರೋಹಿತ್ ಶರ್ಮ ಅವರನ್ನು ಜೆಫ್ರಿ ವಾಂಡರ್ಸೆ ಔಟ್ ಮಾಡಿದರು. 35 ರನ್ ಗಳಿಸಿದ್ದ ಗಿಲ್, 14 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರನ್ನು ಎಲ್ ಬಿ ಡಬ್ಲ್ಯೂ ಗೆ ಔಟ್ ಮಾಡಿದರು. 7 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಅವರನ್ನೂ ಎಲ್ ಬಿ ಡಬ್ಲ್ಯೂ ಮಾಡಿ, ಕೆ.ಎಲ್. ರಾಹುಲ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿ ವಾಂಡರ್ಸೆ ಪರಾಕ್ರಮ ಮೆರೆದರು.
Ad