Categories: ಕ್ರೀಡೆ

ಮೂಡುಬಿದಿರೆ: ಸೌತ್‌ವೆಸ್ಟ್ ಅಂತರ್ ವಿವಿ ಅಥ್ಲೆಟಿಕ್ಸ್- ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್‌

ಮೂಡುಬಿದಿರೆ: ಚೆನ್ನೈನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯದಲ್ಲಿ ಜರುಗಿದ ನೈರುತ್ಯ ವಲಯದ ಅಂತರ್ ವಿಶ್ವವಿದ್ಯಾನಿಲಯದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 186 ಅಂಕಗಳೊಂದಿಗೆ ಎರಡು ವಿಭಾಗದಲ್ಲಿ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಂಗಳೂರು ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ 9 ಚಿನ್ನ, 8 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ ಒಟ್ಟು 23 ಪದಕಗಳೊಂದಿಗೆ ಅಗ್ರಸ್ಥಾನಿಯಾಯಿತು. ಪುರುಷರ ವಿಭಾಗದಲ್ಲಿ 6 ಚಿನ್ನ, 4 ಬೆಳ್ಳಿ, 3 ಕಂಚಿನ ಪದಕಗಳನ್ನು ಸಂಪಾದಿಸುವ ಮೂಲಕ 90 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ಮಹಿಳಾ ವಿಭಾಗದಲ್ಲಿ 3 ಚಿನ್ನ, 4 ಬೆಳ್ಳಿ, 3 ಕಂಚುಗಳೊAದಿಗೆ 96 ಅಂಕಗಳನ್ನು ಗಳಿಸಿ ಪಾರಮ್ಯವನ್ನು ಮೆರೆಯಿತು.

ಆಳ್ವಾಸ್ ಕ್ರೀಡಾಪಟುಗಳ ಸಾಧನೆ
ಮಂಗಳೂರು ವಿವಿ ಸಂಪಾದಿಸಿದ 9 ಚಿನ್ನದ ಪದಕಗಳಲ್ಲಿ 08 ಚಿನ್ನದ ಪದಕ ಆಳ್ವಾಸ್ ಕ್ರೀಡಾಪಟುಗಳು ಪಡೆದಿದ್ದಾರೆ. ಹರೀಶ್ 10,000ಮೀಟರ್ ಹಾಗೂ 5,000ಮೀಟರ್ ಓಟದಲ್ಲಿ ಪ್ರಥಮ, ಹರ್ದೀಪ್ 20ಕಿಲೋಮೀಟರ್ ನಡಿಗೆಯಲ್ಲಿ ಪ್ರಥಮ, ಉಪೇಂದ್ರ ಬಲಿಯನ್ ಹಾಫ್ ಮ್ಯಾರಥಾನ್‌ಲ್ಲಿ ಪ್ರಥಮ, ರಿತೇಶ್ 1500ಮೀಟರ್ ಓಟದಲ್ಲಿ ಪ್ರಥಮ, ಸ್ನೇಹ ಎಸ್ ಎಸ್ 100 ಮೀಟರ್ ಓಟದಲ್ಲಿ ಪ್ರಥಮ, ಕೆವಿನ್ ಅಶ್ವಿನಿ ಹೈ ಜಂಪ್‌ನಲ್ಲಿ ಪ್ರಥಮ, 4*100 ರಿಲೇಯಲ್ಲಿ ಸ್ನೇಹಾ, ನವಮಿ, ವರ್ಷಾ ಹಾಗೂ ಕೀರ್ತನಾ ತಂಡ ಪ್ರಥಮ, ಅಖಿಲೇಶ್ ಟ್ರಿಪಲ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಂಗಳೂರು ವಿವಿ ಸಂಪಾದಿಸಿದ 8 ಬೆಳ್ಳಿ ಪದಕಗಳನ್ನು ಆಳ್ವಾಸ್ ಕ್ರೀಡಾಪಟುಗಳ ಪಡೆದಿದ್ದಾರೆ.

ಸಚಿನ್ ಯಾದವ್ ಜವೆಲಿನ್ ಥ್ರೋ, ಅರ್ಮೊಲ್ ಹೈ ಜಂಪ್, ಸ್ಟಾö್ಯಲಿನ್ ಡೆಕಾಥ್ಲಾನ್, ನಿತಿನ್ ಮಲಿಕ್ ಹ್ಯಾಮರ್ ಥ್ರೋ, ಪೂನಂ 5000 ಮೀಟರ್ ಓಟ, ಅಂಜಲಿ 100 ಮೀಟರ್ ಹರ್ಡಲ್ಸ್, ಶೃತಿಲಕ್ಷ್ಮಿ ಲಾಂಗ್ ಜಂಪ್, ಸ್ನೇಹಲತಾ ಯಾದವ್ 1500 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನಿಯಾಗಿದ್ದಾರೆ.

ಮಂಗಳೂರು ವಿವಿ ಸಂಪಾದಿಸಿದ 6 ಕಂಚಿನ ಪದಕಗಳಲ್ಲಿ 05 ಪದಕಗಳು ಆಳ್ವಾಸ್ ಕ್ರೀಡಾಪಟುಗಳ ಕೊಡುಗೆ ಆಶಿಶ್ ಕುಮಾರ್ ಶಾಟ್‌ಪುಟ್, ಉಜ್ವಲ್ ಡಿಸ್ಕ್ಸ್ ಥ್ರೋ, ನವೀನ್ ಎಸ್ ಪಾಟೀಲ್ ಹಾಫ್ ಮ್ಯಾರಥಾನ್, ಸ್ನೇಹಾ ಎಸ್ ಎಸ್ 200 ಮೀಟರ್ ಓಟ, ಅರ್ಪಿತ 800 ಮೀಟರ್ ಓಟ, ಪೂನಂ 10,000 ಮೀಟರ್ ಓಟ ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Sneha Gowda

Recent Posts

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

17 mins ago

ಕ್ರಿಕೆಟ್ ಪಂದ್ಯದ ವೇಳೆ 21 ವರ್ಷದ ಯುವಕನನ್ನು ಥಳಿಸಿ ಹತ್ಯೆ

ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…

19 mins ago

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…

34 mins ago

ಕೈ ತಪ್ಪಿದ ವಿಧಾನಪರಿಷತ್ ಟಿಕೆಟ್: ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾ‌ನ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…

50 mins ago

ಇಂದು ದಾದಿಯರ ದಿನ; ದಣಿವರಿಯಿಲ್ಲದೆ ಕೆಲಸ ಮಾಡುವ ದಾದಿಯರಿಗೊಂದು ಸಲಾಂ

ಪ್ರಪಂಚದಾದ್ಯಂತ ಮೇ 12ರಂದು ಅಂತರಾಷ್ಟ್ರೀಯ ದಾದಿಯರ ದಿನ ವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ವಿಶ್ವಾದ್ಯಂತ ಅಂತರರಾಷ್ಟ್ರೀಯ…

1 hour ago

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

1 hour ago