ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಸೆಪ್ಟೆಂಬರ್ 4 ರಂದು ಭಾರತೀಯ ಕ್ರೀಡಾಪಟುಗಳು 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಪದಕಗಳ ಸಂಖ್ಯೆಯನ್ನು 24 ಕ್ಕೇರಿಸಿದ್ದಾರೆ. ಇದೀಗ ಶಾಟ್‌ಪುಟ್‌ನಲ್ಲಿ ಸಚಿನ್ ಖಿಲಾರಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಹಾಗೆಯೇ ಕ್ಲಬ್ ಥ್ರೋನಲ್ಲಿ ಪ್ರಣವ್ ಸೂರ್ಮಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತವು ಒಟ್ಟು 5 ಚಿನ್ನದ ಪದಕ, 9 ಬೆಳ್ಳಿ ಪದಕ ಹಾಗೂ 10 ಕಂಚಿನ ಪದಕಗಳೊಂದಿಗೆ ಒಟ್ಟು 24 ಮೆಡಲ್ಗಳನ್ನು ಗೆದ್ದಿದೆ. ಇನ್ನು ಭಾನುವಾರದವರೆಗೆ ಕ್ರೀಡಾಕೂಟ ಮುಂದುವರೆಯಲಿದ್ದು, ಹೀಗಾಗಿ ಭಾರತದ ಒಟ್ಟು ಪದಕಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
Ad