Bengaluru 22°C
Ad

ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿ ಶಾಸ್ತಾ ವಿ ನಾಕ್ ರಾಷ್ಟ್ರಮಟ್ಟದ ಸಾಧನೆ

ನವೆಂಬರ್ 08 ಮತ್ತು 09ರಂದು ಬೆಂಗಳೂರಿನ ನಡೆದ ಸಿಬಿಎಸ್‌ಇ ಪ್ರಾದೇಶಿಕ ಮಟ್ಟದ ವಿಜ್ಞಾನ ಮಾದರಿ “2024 ಇನ್ನೋವೇಟಿವ್ ಇಂಟರ್ನ್ಯಾಶನಲ್ ಸ್ಕೂಲ್” ಸ್ಪರ್ಧೆಯಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯ 8 ನೇ ತರಗತಿಯ ಶಾಸ್ತಾ ವಿ ನಾಕ್ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರು: ನವೆಂಬರ್ 08 ಮತ್ತು 09ರಂದು ಬೆಂಗಳೂರಿನ ನಡೆದ ಸಿಬಿಎಸ್‌ಇ ಪ್ರಾದೇಶಿಕ ಮಟ್ಟದ ವಿಜ್ಞಾನ ಮಾದರಿ “2024 ಇನ್ನೋವೇಟಿವ್ ಇಂಟರ್ನ್ಯಾಶನಲ್ ಸ್ಕೂಲ್” ಸ್ಪರ್ಧೆಯಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯ 8 ನೇ ತರಗತಿಯ ಶಾಸ್ತಾ ವಿ ನಾಕ್ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Ad

2024 ರ ನವೆಂಬರ್ 13 ರಿಂದ 16 ರವರೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ವಿದ್ಯಾ ಭಾರತಿಯ ರಾಷ್ಟ್ರ ಮಟ್ಟದ ಅಖಿಲ ಭಾರತ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

Ad

ಪ (2)

ಅದಲ್ಲದೆ ಇಂಪಾಕ್ಟ್ ಆರ್ಟ್ಸ್ ಅಕಾಡೆಮಿ ವತಿಯಿಂದ ನಡೆದ 2024 ರ ಮುಕ್ತ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಶಾಸ್ತ ವಿ ನಾಕ್ ಬ್ಲಾಕ್ ಬೆಲ್ಟ್ ವಿಭಾಗದ ಕಟ್ಟಾದಲ್ಲಿ ಚಿನ್ನದ ಪದಕ ಮತ್ತು ಕುಮಿಟೆಯಲ್ಲಿ ಕಂಚಿನ ಪದಕವನ್ನು ಗಳಿಸುವ ಮೂಲಕ ಶಕ್ತಿ ವಿದ್ಯಾ ಸಂಸ್ಥೆಗೆ ಗೌರವವನ್ನು ತಂದಿರುತ್ತಾರೆ.

Ad

ಈ ಸಂದರ್ಭದಲ್ಲಿ ವಿಜೇತರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾಕ್, ಕಾರ್ಯದರ್ಶಿ ಶ್ರೀ ಸಂಜಿತ್ ನಾಕ್. ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.

Ad
Ad
Ad
Nk Channel Final 21 09 2023