Bengaluru 20°C
Ad

ಎಸ್.ಜಿ.ಎಫ್.ಐ ರಾಷ್ಟ್ರಮಟ್ಟದ ಚೆಸ್‌ಪಂದ್ಯಾಟ : ವಿವೇಕಾನಂದ ಕಾಲೇಜಿನ ಧನುಷ್ ರಾಮ್‌ ಗೆ ಕಂಚಿನ ಪದಕ

ಕೊಲ್ಕತ್ತಾದಲ್ಲಿ ನಡೆದ ಸ್ಕೂಲ್‌ಗೇಮ್ಸ್‌ ಫೆಡರೇಶನ್‌ ಆಫ್‌ಇಂಡಿಯಾ(SGFI) ದ 68ನೇ ರಾಷ್ಟ್ರ ಮಟ್ಟದ ಚೆಸ್‌ಪಂದ್ಯಾಟದಲ್ಲಿ ಕರ್ನಾಟಕ ತಂಡದ ನಾಯಕನಾಗಿ ಪ್ರತಿನಿಧಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಧನುಷ್ ರಾಮ್‌ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.

ಪುತ್ತೂರು: ಕೊಲ್ಕತ್ತಾದಲ್ಲಿ ನಡೆದ ಸ್ಕೂಲ್‌ಗೇಮ್ಸ್‌ ಫೆಡರೇಶನ್‌ ಆಫ್‌ಇಂಡಿಯಾ(SGFI) ದ 68ನೇ ರಾಷ್ಟ್ರ ಮಟ್ಟದ ಚೆಸ್‌ಪಂದ್ಯಾಟದಲ್ಲಿ ಕರ್ನಾಟಕ ತಂಡದ ನಾಯಕನಾಗಿ ಪ್ರತಿನಿಧಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಧನುಷ್ ರಾಮ್‌ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.

Ad

ಇವರು ಪುತ್ತೂರಿನ ದಿನೇಶ್‌ಪ್ರಸನ್ನ ಹಾಗೂ ಉಮಾ ಡಿ ಪ್ರಸನ್ನ ಇವರ ಪುತ್ರ . ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್‌, ಡಾ. ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿದ್ದು, ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

Ad
Ad
Ad
Nk Channel Final 21 09 2023