Ad

ಸೆಮಿಫೈನಲ್ ಗೆ​ ಪ್ರವೇಶಿಸಿರುವ ಅಫಘಾನಿಸ್ತಾನ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಚಿನ್​ ತೆಂಡೂಲ್ಕರ್​

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಅಫಘಾನಿಸ್ತಾನ ತಂಡಕ್ಕೆ ಕ್ರಿಕೆಟ್​ ದೇವರು, ಸಚಿನ್​ ತೆಂಡೂಲ್ಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಅಫಘಾನಿಸ್ತಾನ ತಂಡಕ್ಕೆ ಕ್ರಿಕೆಟ್​ ದೇವರು, ಸಚಿನ್​ ತೆಂಡೂಲ್ಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Ad
300x250 2

ಟ್ವಿಟರ್​ ಎಕ್ಸ್​ನಲ್ಲಿ ಅಫಘಾನಿಸ್ತಾನ ತಂಡದ ಸಾಧನೆಯನ್ನು ಸಚಿನ್ ಕೊಂಡಾಡಿದ್ದು​, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ನಿಮ್ಮ ಗೆಲುವಿನ ಹಾದಿಯು ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹೀಗೇ ಮುಂದುವರಿಯಿರಿ ಎಂದು ಶುಭ ಹಾರೈಸಿದ್ದಾರೆ.

ಏಕದಿನ ವಿಶ್ವಕಪ್​ ಟೂರ್ನಿಯ ವೇಳೆಯೂ ಸಚಿನ್​ ತೆಂಡೂಲ್ಕರ್​ ಅವರು ಪಾಕಿಸ್ತಾನವನ್ನು ಮಣಿಸಿದ ಬಳಿ ಅಫಫಾನಿಸ್ತಾನ ತಂಡವನ್ನು ಹೊಗಳಿದ್ದರು. “ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಆಟದಲ್ಲಿ ತೋರುತ್ತಿರುವ ಅವರ ಶಿಸ್ತು, ಮನೋಧರ್ಮ ಮತ್ತು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿರುವ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ತೋರಿಸುತ್ತಿದೆ.

ಬಹುಶಃ ಇದು ಶ್ರೀ ಅಜಯ್ ಜಡೇಜಾ ಅವರ ಪ್ರಭಾವದ ಕಾರಣದಿಂದಾಗಿರಬಹುದು. ಅಸಾಧಾರಣ ಪ್ರದರ್ಶನದೊಂದಿಗೆ ಬಲಿಷ್ಠ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳ ಮೇಲೆ ಸವಾರಿ ಮಾಡಿದ ನಿಮ್ಮ ಈ ಸಾಹಸ ಹೀಗೆಯೇ ಮುಂದುವರಿಯಲಿ. ಇನ್ನೂ ಕೂಡ ಅಚ್ಚರಿಯ ಫಲಿತಾಂಶವನ್ನು ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ” ಎಂದು ಬರೆದುಕೊಂಡಿದ್ದರು.

ಅಫಘಾನಿಸ್ತಾನ ತಂಡ ಐತಿಹಾಸಿಕ ಸಾಧನೆ ಮಾಡಿದ ಸಂತಸದಲ್ಲಿ ಆಫ್ಘನ್ನರು ತಮ್ಮ ದೇಶದಲ್ಲಿ , ಪಟಾಕಿ ಸಿಡಿಸಿ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಅಫಘಾನಿಸ್ತಾನ ಜೂನ್​ 26ರಂದು ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ. ಗೆದ್ದರೆ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಜತೆಗೆ ಕಪ್​ ಗೆದ್ದಷ್ಟೇ ಸಂಭ್ರಮ ಆಚರಿಸಲಿದೆ.

Ad
Ad
Nk Channel Final 21 09 2023
Ad