ಬೆಂಗಳೂರು: ಇಂದು ರಕ್ಷಾ ಬಂಧನ ದಿನ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದೆ. ಸದ್ಯ ಆರ್ಸಿಬಿ ಮಾಡಿರುವ ಫೋಟೋ ಭಾರೀ ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳ ಮನ ಗೆದ್ದಿದೆ.
ಆರ್ಸಿಬಿ ಎಕ್ಸ್ನಲ್ಲಿ ಕೊಹ್ಲಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಬ್ಯಾಟ್ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದೆ. ‘ಸೂಪರ್ಸ್ಟಾರ್ಸ್ ತಮ್ಮ ಬ್ಯಾಟನ್ನು ರಕ್ಷಿಸಿದಂತೆ ನಿಮ್ಮ ಸೋದರಿಯರನ್ನು ರಕ್ಷಿಸಿ. ನಿಮ್ಮ ಹೃದಯಕ್ಕೆ ಹತ್ತಿರದಂತೆ, ನಿಮ್ಮ ಅಪ್ಪುಗೆ ಬಿಗಿಗೊಳ್ಳುವಂತೆ’ ಎಂದು ಅಡಿಬರಹ ನೀಡಿದೆ.
ಅಂದಹಾಗೆಯೇ ಇಂದು ರಕ್ಷಾಬಂಧನ ವಿಶೇಷ ದಿನವಾಗಿದೆ. ಈ ಶುಭದಿನದಂದು ಆರ್ಸಿಬಿ ಟ್ವಿಟ್ಟರ್ ಖಾತೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಕೊಹ್ಲಿ ಮತ್ತು ಶ್ರೇಯಾಂಕಾ ತಮ್ಮ ಬ್ಯಾಟ್ ಅನ್ನು ರಕ್ಷಿಸುವಂತೆ, ಸಹೋದರಿಯರನ್ನು ರಕ್ಷಿಸಿ ಎಂಬ ಸಂದೇಶ ಸಾರಿದೆ.
Protect your sisters the way our superstars protect their bats. 🫡
Close to your heart, cozy in your hug. 🫂 #PlayBold #RakshaBandhan pic.twitter.com/m9EFNuIKaT
— Royal Challengers Bengaluru (@RCBTweets) August 19, 2024