Ad

ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ​ ರವೀಂದ್ರ ಜಡೇಜಾ

Ravindra Jadeja Announces Retirement

ನವದೆಹಲಿ: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಭಾರತವು ಟಿ 20 ವಿಶ್ವಕಪ್ 2024 ಅನ್ನು ಗೆದ್ದ ನಂತರ ಟೀಂ ಇಂಡಿಯಾದ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಟಿ 20 ವಿಶ್ವಕಪ್ ಗೆ ವಿದಾಯ ಘೋಷಿಸಿದ್ದರು. ಇದೀಗಾ ಈ ಸಾಲಿಗೆ ಭಾರತದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಸೇರಿಕೊಂಡಿದ್ದಾರೆ. ಹೌದು… ಮುಂದಿನ ಅಂತರರಾಷ್ಟ್ರೀಯ ಪಂದ್ಯಗಳಿಂದ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ.

Ad
300x250 2

ಆಲ್ರೌಂಡರ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಧಿಕೃತ ಹ್ಯಾಂಡಲ್ನಲ್ಲಿ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.  ನಾನು ಸದಾ ಟೀಮ್​ ಇಂಡಿಯಾಗೆ ನನ್ನ ಕೈಯಲ್ಲಾದಷ್ಟು ಕೊಡುಗೆ ನೀಡಿದ್ದೇನೆ. ಟಿ20 ವಿಶ್ವಕಪ್​ ಗೆಲ್ಲಬೇಕು ಅನ್ನೋದು ನನ್ನ ದೊಡ್ಡ ಕನಸಾಗಿತ್ತು. ಈಗ ನನ್ನ ಕನಸು ನನಸಾಗಿದೆ. ನನ್ನ ಕ್ರಿಕೆಟ್​ ಜರ್ನಿಯಲ್ಲಿ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ಇದು ಟಿ20 ಕ್ರಿಕೆಟ್​ಗೆ ವಿದಾಯ ಹೇಳುವ ಸಮಯ. ಟಿ20 ಕ್ರಿಕೆಟ್​ ಹೊರತು ಏಕದಿನ ಮತ್ತು ಟೆಸ್ಟ್​​ ಫಾರ್ಮೇಟ್​​ನಲ್ಲಿ ಆಟ ಮುಂದುವರಿಸುತ್ತೇನೆ ಎಂದು ನಿವೃತ್ತಿ ಘೋಷಿಸಿದ್ದಾರೆ.

Ad
Ad
Nk Channel Final 21 09 2023
Ad