Bengaluru 22°C
Ad

ಟಿ20 ವಿಶ್ವಕಪ್​ನೊಂದಿಗೆ ಗುಡ್ ಬೈ: ರಾಹುಲ್ ದ್ರಾವಿಡ್

Drvid

ಮುಂಬೈ: ಈ ಬಾರಿಯ ಟಿ20 ವಿಶ್ವಕಪ್​ ಮುಕ್ತಾಯದೊಂದಿಗೆ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿಯುವುದಾಗಿ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ಈ ವಿಶ್ವಕಪ್​ನೊಂದಿಗೆ ನನ್ನ ಕಾರ್ಯಾವಧಿ ಮುಗಿಯಲಿದ್ದು, ಇದಾಗ್ಯೂ ಮತ್ತೊಮ್ಮೆ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದಿಲ್ಲ ಎಂದು ದೃಢಪಡಿಸಿದ್ದಾರೆ.

Ad

ಇದರೊಂದಿಗೆ ಟೀಮ್ ಇಂಡಿಯಾ ಜೊತೆಗಿನ ರಾಹುಲ್​ ದ್ರಾವಿಡ್ ಅವರ ನಂಟು ಈ ಬಾರಿಯ ಟಿ20 ವಿಶ್ವಕಪ್​ನೊಂದಿಗೆ ಮುಗಿಯಲಿದೆ. ನವೆಂಬರ್ 2021 ರಲ್ಲಿ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಹಲವು ಸರಣಿಗಳಲ್ಲಿ ಜಯ ಸಾಧಿಸಿತ್ತು.

Ad

ಇದಾಗ್ಯೂ ಐಸಿಸಿ ಟೂರ್ನಿ ಗೆಲ್ಲಲಾಗಲಿಲ್ಲ. ಇದರ ನಡುವೆ ಭಾರತ ತಂಡವು 2022 ರಲ್ಲಿ ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಆಡಿದೆ.  ಈ ಬಾರಿಯ ಟಿ20 ವಿಶ್ವಕಪ್​ನೊಂದಿಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಕೆರಿಯರ್ ಮುಗಿಯಲಿದೆ. ಹೀಗಾಗಿ ಐಸಿಸಿ ಟ್ರೋಫಿ ಗೆಲ್ಲಲು ಇದುವೇ ಕೊನೆಯ ಅವಕಾಶ. ಅದರಂತೆ ಟಿ20 ವಿಶ್ವಕಪ್​ನೊಂದಿಗೆ ಟೀಮ್ ಇಂಡಿಯಾ ಆಟಗಾರರು ರಾಹುಲ್ ದ್ರಾವಿಡ್​ಗೆ ಬೀಳ್ಕೊಡಲಿದ್ದಾರಾ ಕಾದು ನೋಡಬೇಕಿದೆ.

Ad
Ad
Ad
Nk Channel Final 21 09 2023