News Karnataka Kannada
Monday, April 29 2024
ಕ್ರೀಡೆ

ಕಡಿಮೆ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ರಚಿನ್ ರವೀಂದ್ರ

Rachin Ravindra sold to Chennai Super Kings for a low total
Photo Credit : News Kannada

ದುಬೈ: ಐಪಿಎಲ್ ಸೀಸನ್ 17 ರಲ್ಲಿ ನ್ಯೂಝಿಲೆಂಡ್​ ಆಟಗಾರ ರಚಿನ್ ರವೀಂದ್ರ ಕಣಕ್ಕಿಳಿಯುವುದು ಖಚಿತವಾಗಿದೆ. ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆದ ಬಿಡ್ಡಿಂಗ್​ನಲ್ಲಿ ರಚಿನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ ಖರೀದಿಸಿದೆ.

50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಚಿನ್ ರವೀಂದ್ರ ಅವರ ಖರೀದಿಗೆ ಹೆಚ್ಚಿನ ಆಸಕ್ತಿ ಕಂಡು ಬಂದಿರಲಿಲ್ಲ. ಇತ್ತ ಸಿಎಸ್​ಕೆ ಫ್ರಾಂಚೈಸಿಗೆ ಅಂತಿಮ ಹಂತದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪೈಪೋಟಿ ನೀಡಿತು. ಪರಿಣಾಮ ರಚಿನ್ ರವೀಂದ್ರ ಹರಾಜು ಮೌಲ್ಯ 1 ಕೋಟಿ ರೂ. ದಾಟಿತು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ 1.80 ಕೋಟಿಗೆ ರಚಿನ್ ರವೀಂದ್ರ ಅವರನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ನಲ್ಲಿ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದ್ದರು.

ಇನ್ನು ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂದಾಗಲಿಲ್ಲ ಮತ್ತು ಬಿಡ್ಡಿಂಗ್ ವಾರ್ ನಡೆಸಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು