Ad

`ವಿನೇಶ್ ಪೋಗಟ್’ ಅನರ್ಹತೆ ಕುರಿತು ಪ್ರಕಾಶ್ ರಾಜ್ ವಿವಾದಾತ್ಮಕ ಕಾರ್ಟೂನ್ ಪೋಸ್ಟ್!

Post

ಬೆಂಗಳೂರು: ಭಾರತೀಯ ಕುಸ್ತಿಪಟು ‘ವಿನೇಶ್ ಪೋಗಟ್’ ಅನರ್ಹತೆ ವಿಚಾರಕ್ಕೆ ಭಾರತದ ಕೋಟ್ಯಾಂತರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ನಟ ‘ಪ್ರಕಾಶ್ ರೈ’ ಮಾಡಿದ ಕಾರ್ಟೂನ್ ಪೋಸ್ಟ್ ಒಂದು ವಿವಾದ ಸೃಷ್ಟಿಸಿದೆ. ಪ್ರಕಾಶ್ ರೈ ಪೋಸ್ಟ್ ನಲ್ಲಿ ‘ ವಿನೇಶ್ ಪೋಗಟ್ ತೂಕ ತಪಾಸಣೆ ಮಾಡುವಾಗ ಹಿಂದಿನಿಂದ ಒಬ್ಬ ವ್ಯಕ್ತಿ ತೂಕದ ಯಂತ್ರದ ಮೇಲೆ ಒಂದು ಕಾಲನ್ನು ಇಟ್ಟಿರುವುದನ್ನು ಕಾಣಬಹುದು.

ಈ ಬಗ್ಗೆ ನಿಮ್ಮ ಅಭಿಪ್ರಾಯವೇನು..? ಕಾಲು ಇಟ್ಟಿರುವ ವ್ಯಕ್ತಿ ಯಾರು ಎಂದು ಊಹಿಸಿ ಎಂದು ಪ್ರಕಾಶ್ ರೈ ಪೋಸ್ಟ್ ಮಾಡಿದ್ದಾರೆ.

https://x.com/prakashraaj/status/1821217559233884491

ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಇಂದು ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ವಿನೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅಮ್ಮಾ, ನನ್ನಿಂದ ಕುಸ್ತಿ ಗೆದ್ದಿದೆ! ನಾನು ಸೋತಿದ್ದೇನೆ. ಕ್ಷಮಿಸಿ.. ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಭಗ್ನವಾಗಿದೆ. ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ.

Ad
Ad
Nk Channel Final 21 09 2023