Bengaluru 23°C
Ad

ಯುಎಫ್​ಸಿ ಪಂದ್ಯ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಪೂಜಾ ತೋಮರ್

ಯುಎಫ್​ಸಿ ಪಂದ್ಯ ಗೆದ್ದ ಮೊದಲ ಭಾರತೀಯ ಆಟಗಾರ್ತಿ 28 ವರ್ಷದ ಪೂಜಾ ತೋಮರ್ ದಾಖಲೆ ಬರೆದಿದ್ದಾರೆ.

ಲೂಯಿಸ್ವಿಲ್ಲೆ: ಯುಎಫ್​ಸಿ ಪಂದ್ಯ ಗೆದ್ದ ಮೊದಲ ಭಾರತೀಯ ಆಟಗಾರ್ತಿ 28 ವರ್ಷದ ಪೂಜಾ ತೋಮರ್ ದಾಖಲೆ ಬರೆದಿದ್ದಾರೆ.

ಉತ್ತರ ಪ್ರದೇಶದ ಮೂಲದವರಾದ ತೋಮರ್, ಕಳೆದ ವರ್ಷ ಯುಎಫ್‌ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಮಾಜಿ ರಾಷ್ಟ್ರೀಯ ವುಶು ಚಾಂಪಿಯನ್, ಒನ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಖ್ಯಾತ ಭಾರತೀಯ ಮಹಿಳಾ ಫೈಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಭಾನುವಾರ ನಡೆದ ಪಂದ್ಯದಲ್ಲಿ ತೋಮರ್ ಅವರು 30-27, 27-30, 29-28 ರ ಸ್ಪ್ಲಿಟ್ ನಿರ್ಧಾರದಿಂದ ರಾಯನ್ನೆ ಅಮಂಡಾ ಡಾಸ್ ಸ್ಯಾಂಟೋಸ್ ಅವರನ್ನು ಮಣಿಸಿ ಪ್ರಾಬಲ್ಯ ಮೆರೆದರು.

ಗೆಲುವಿನ ಬಳಿಕ ಮಾತನಾಡಿದ ತೋಮರ್​, “ಈ ಗೆಲುವನ್ನು ಎಲ್ಲಾ ಭಾರತೀಯ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ರಾಷ್ಟ್ರಗೀತೆ ಮತ್ತು ತ್ರಿವರ್ಣ ಧ್ವಜದೊಂದಿಗೆ ಹೊರ ನಡೆಯುವುದು ನನಗೆ ರೋಮಾಂಚನ ನೀಡಿತು” ಎಂದು ಅವರು ಹೇಳಿದರು.

Ad
Ad
Nk Channel Final 21 09 2023
Ad