ಪ್ಯಾರಿಸ್: ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದ ಹರ್ವಿಂದರ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಯ ಸ್ಪ್ರಿಂಟರ್ ಪ್ರೀತಿ ಪಾಲ್ ಅವರು ಪ್ಯಾರಾಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಧ್ವಜಧಾರಿಗಳಾಗಿ ಭಾರತವನ್ನು ಪ್ರತಿನಿಧಿಸುವುದು ನಮಗೆ ಸಿಕ್ಕಿದ ಬಲುದೊಡ್ಡ ಗೌರವ. ಅದ್ಭುತ ಸಾಧನೆ ಮಾಡಿದ ಭಾರತ ತಂಡವನ್ನು ಮುನ್ನಡೆಸುವ ಭಾಗ್ಯ ಸಿಕ್ಕಿರುವುದರಿಂದ ರೋಮಾಂಚನವಾಗಿದೆ ಎಂದು ಪ್ರೀತಿ ಮತ್ತು ಹರ್ವಿಂದರ್ ಹೇಳಿದ್ದಾರೆ. ಇನ್ನು ಇದು ಭಾರತಕ್ಕೆ ದೊಡ್ಡ ಹೆಮ್ಮೆಯ ವಿಚಾರ.
Ad