Ad

ಟೂರ್ನಿಯಿಂದ ಔಟ್‌ ಆದ ಪಾಕಿಸ್ತಾನ : ಸೂಪರ್‌ 8ಕ್ಕೆ ಪ್ರವೇಶ ಪಡೆದ ಅಮೆರಿಕ

ಟಿ20 ವಿಶ್ವಕಪ್‌ ಗೆಲ್ಲಲೇಬೇಕೆಂದು ಸೇನಾ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದ ಪಾಕಿಸ್ತಾನ ಈಗ ಟೂರ್ನಿಯಿಂದಲೇ ಔಟ್‌ ಆಗಿದೆ. ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಯಿಂದ ರದ್ದಾಗಿದೆ. ಪರಿಣಾಮ ಅಮೆರಿಕ ಅಧಿಕೃತವಾಗಿ ಸೂಪರ್‌ 8 ಪ್ರವೇಶಿಸಿದ್ದು ಪಾಕ್‌ ಕನಸು ನುಚ್ಚು ನೂರಾಗಿದೆ.

ಫ್ಲೋರಿಡಾ: ಟಿ20 ವಿಶ್ವಕಪ್‌ ಗೆಲ್ಲಲೇಬೇಕೆಂದು ಸೇನಾ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದ ಪಾಕಿಸ್ತಾನ ಈಗ ಟೂರ್ನಿಯಿಂದಲೇ ಔಟ್‌ ಆಗಿದೆ. ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಯಿಂದ ರದ್ದಾಗಿದೆ. ಪರಿಣಾಮ ಅಮೆರಿಕ ಅಧಿಕೃತವಾಗಿ ಸೂಪರ್‌ 8 ಪ್ರವೇಶಿಸಿದ್ದು ಪಾಕ್‌ ಕನಸು ನುಚ್ಚು ನೂರಾಗಿದೆ.

Ad
300x250 2

ಎ ಗುಂಪಿನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ 6 ಅಂಕಗಳನ್ನು ಪಡೆದು ಭಾರತ ಈಗಾಗಲೇ ಸೂಪರ್‌ 8 ಪ್ರವೇಶಿಸಿದ್ದರೆ ಅಮೆರಿಕ ಮತ್ತು ಪಾಕ್‌ ಮಧ್ಯೆ ತೀವ್ರ ಸ್ಪರ್ಧೆ ಇತ್ತು. ಅಮೆರಿಕ ಎರಡು ಪಂದ್ಯ ಗೆದ್ದಿದ್ದರೆ ಪಾಕ್‌ ಒಂದು ಪಂದ್ಯ ಗೆದ್ದಿತ್ತು.

ಶುಕ್ರವಾರದ ಪಂದ್ಯ ರದ್ದಾದ ಕಾರಣ ಇತ್ತಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇದರಿಂದಾಗಿ 5 ಅಂಕದೊಂದಿಗೆ ಅಮೆರಿಕ ಸೂಪರ್‌ 8 ಪ್ರವೇಶಿಸಿತು. ಒಂದು ವೇಳೆ ಅಮೆರಿಕ ಈ ಪಂದ್ಯವನ್ನು ಸೋತಿದ್ದರೆ ಪಾಕ್‌ಗೆ ಒಂದು ಅವಕಾಶವಿತ್ತು.

ಪಾಕಿಸ್ತಾನ 3 ಪಂದ್ಯವಾಡಿ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೂ 4 ಅಂಕ ಮಾತ್ರ ಸಂಪಾದಿಸುವುದರಿಂದ ಪಾಕ್‌ ಸೂಪರ್‌ 8 ಪ್ರವೇಶಿಸಲು ವಿಫಲವಾಯಿತು. ಪಾಕ್‌ ಜೊತೆಗೆ ಎ ಗುಂಪಿನಲ್ಲಿದ್ದ ಕೆನಡಾ ಮತ್ತು ಐರ್ಲೆಂಡ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.

Ad
Ad
Nk Channel Final 21 09 2023
Ad