Ad

ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್​ ನದೀಮ್​ಗೆ ತೆರಿಗೆ ಕಟ್ಟುವಂತೆ ಪಾಕ್ ಸೂಚನೆ

ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವ ಪಾಕಿಸ್ತಾನದ ಅರ್ಷದ್​ ನದೀಮ್​ಗೆ ಪ್ರೋತ್ಸಾಹವಾಗಿ ಪಾಕಿಸ್ತಾನ ಸರ್ಕಾರ ಕಿಂಚಿತ್ತು ಸಹಾಯ ಮಾಡದಿದ್ದರೂ ಕೂಡ ಇದೀಗ ಅವರಿಗೆ ಕೋಟಿಗಟ್ಟಲೇ ತೆರಿಗೆ ಕಟ್ಟುವಂತೆ ಸೂಚಿಸಿದೆ.

ಕರಾಚಿ: ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವ ಪಾಕಿಸ್ತಾನದ ಅರ್ಷದ್​ ನದೀಮ್​ಗೆ ಪ್ರೋತ್ಸಾಹವಾಗಿ ಪಾಕಿಸ್ತಾನ ಸರ್ಕಾರ ಕಿಂಚಿತ್ತು ಸಹಾಯ ಮಾಡದಿದ್ದರೂ ಕೂಡ ಇದೀಗ ಅವರಿಗೆ ಕೋಟಿಗಟ್ಟಲೇ ತೆರಿಗೆ ಕಟ್ಟುವಂತೆ ಸೂಚಿಸಿದೆ.

ಸುಮಾರು 3 ರಿಂದ 6 ಕೋಟಿ ರೂ. ತೆರಿಗೆ ಪಾವತಿಸುವಂತೆ ನದೀಮ್​ಗೆ ಸೂಚಿಸುವ ಮೂಲಕ ಶಾಕ್​ ಕೊಟ್ಟಿದೆ. ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ನಿಯಮಗಳು ಹೇಳುವ ಪ್ರಕಾರ, ಆಟಗಾರರರು ಪಡೆದ ಬಹುಮಾನದ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಾಗುತ್ತದೆ. ಅರ್ಷದ್​ ನದೀಮ್​ ಈವರೆಗೂ 20 ಕೋಟಿ ರೂ. ಬಹುಮಾನ ಮೊತ್ತವನ್ನು ಸ್ವೀಕರಿಸಿದ್ದು, ಈ ಮೊತ್ತಕ್ಕೆ ಅವರು ತೆರಿಗೆಯನ್ನು ಪಾವತಿಸಬೇಕಿದೆ.

ಚಿನ್ನ ಗೆದ್ದ ನದೀಮ್​ಗೆ ಪಾಕಿಸ್ತಾನ ಪ್ರಾಂತ್ಯದ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ 10 ಕೋಟಿ ರೂ., ಸಿಂಧ್ ಸರ್ಕಾರ ಐದು ಕೋಟಿ ರೂ., ವಿಶ್ವ ಅಥ್ಲೀಟ್ ಫೆಡರೇಶನ್ ಒಂದು ಕೋಟಿ 40 ಲಕ್ಷ ಬಹುಮಾನ ಘೋಷಿಸಿದ್ದು, ಸಿಂಧ್ ಗವರ್ನರ್ ಕಮ್ರಾನ್ ತೆಸ್ಸೋರಿ, ಕ್ರಿಕೆಟಿಗ ಅಹ್ಮದ್ ಶೆಹಜಾದ್ ಮತ್ತು ಓರ್ಷ ಗಾಯಕ 30 ಲಕ್ಷಗಳನ್ನು ನೀಡಿದ್ದಾರೆ.

ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್‌ ಚಾನುವಿನಲ್ಲಿನ ಬಡ ಪಂಜಾಬಿ ಕುಟುಂಬದಲ್ಲಿ ಜನಿಸಿದ ಅರ್ಷದ್‌ ನದೀಮ್‌, ಇಂದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮುಹಮ್ಮದ್‌ ಅಶ್ರಫ್‌ ಗಾರೆ ಮೇಸ್ತ್ರಿ ಆಗಿದ್ದ ಕಾರಣ, ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಅರ್ಷದ್‌ ನದೀಮ್‌ ಕೂಡ ತಂದೆಯ ಜತೆ ಗಾರೆ ಕೆಲಸವನ್ನು ಮಾಡಿದ್ದರು. ಇದರೆ ಜತೆಗೆ ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಅರ್ಷದ್​ ಅವರು ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹಲವು ಪದಕಗಳನ್ನು ಗೆದ್ದು ಕೊಟ್ಟರು ಕೂಡ ಪಾಕಿಸ್ತಾನ ಸರ್ಕಾರ ಅವರಿಗೆ ಕಿಂಚಿತ್ತು ಹಣಕಾಸಿಕ ನೆರವು ನೀಡಲೇ ಇಲ್ಲ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ, ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ನದೀಮ್ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರಿಗೆ ಪಾಕ್‌ ಸರ್ಕಾರದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ಊರಿನ ಜನರಿಂದ ಸಿಕ್ಕ ಹಣಕಾಸಿಕ ನೆರವಿನಿಂದ ಟೋಕಿಯೊದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ 5ನೇ ಸ್ಥಾನ ಪಡೆದಿದ್ದರು. ಈ ಬಾರಿ ಪ್ಯಾರಿಸ್​ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

Ad
Ad
Nk Channel Final 21 09 2023