Bengaluru 28°C
Ad

ಭಾರತದ ಬದಲು ಚೀನಾ ತಂಡಕ್ಕೆ ಪಾಕ್ ಆಟಗಾರರ ಬೆಂಬಲ; ಫೋಟೋ ವೈರಲ್

China (1)

ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರೀಕ್ಷೆಯಂತೆ ಭಾರತ ಹಾಕಿ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಂದು ನಡೆದ ಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಹರ್ಮನ್​ಪ್ರೀತ್ ಸಿಂಗ್ ಪಡೆ ದಾಖಲೆಯ 5ನೇ ಬಾರಿಗೆ ಏಷ್ಯನ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ವಾಸ್ತವವಾಗಿ ಈ ಪಂದ್ಯಾವಳಿ ಗೆಲ್ಲುವ ತಂಡಗಳ ಪೈಕಿ ಭಾರತವೇ ಫೇವರೇಟ್ ಆಗಿತ್ತು. ಭಾರತವನ್ನು ಹೊರತುಪಡಿಸಿದರೆ ಪಾಕಿಸ್ತಾನ ತಂಡದತ್ತ ಎಲ್ಲರ ಬೆರಳುಗಳು ಹೋಗುತ್ತಿದ್ದವು.

ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಚೀನಾ ತಂಡದ ವಿರುದ್ಧ ಸೋತ ಪಾಕ್ ತಂಡ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿತ್ತು. ಆದಾಗ್ಯೂ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದ ಪಾಕ್ ತಂಡ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಆದರೆ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವನ್ನು ಸಹಿಸದ ಪಾಕಿಸ್ತಾನದ ಆಟಗಾರರು ಆರಂಭದಿಂದಲೂ ಭಾರತದ ಎದುರಾಳಿಯಾಗಿದ್ದ ಚೀನಾ ತಂಡಕ್ಕೆ ಬೆಂಬಲ ನೀಡಿದ್ದರು. ಇದೀಗ ಅದರ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಹೌದು. . ಮೂರನೇ ಸ್ಥಾನಕ್ಕಾಗಿ ಇಂದು ನಡೆದ ಮೊದಲ ಪಂದ್ಯದಲ್ಲಿ ಕೊರಿಯಾವನ್ನು ಮಣಿಸಿದ್ದ ಪಾಕಿಸ್ತಾನದ ಆಟಗಾರರು, ಆ ಬಳಿಕ ಫೈನಲ್ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಕ್ರೀಡಾಂಗಣದಲ್ಲಿಯೇ ಉಳಿದಿದ್ದರು. ಈ ವೇಳೆ ಪಾಕ್ ತಂಡದ ಭಾಗಶಃ ಆಟಗಾರರ ಕೈಯಲ್ಲಿ ಚೀನಾದ ಧ್ವಜಗಳು ಕಂಡುಬಂದವು.

Ad
Ad
Nk Channel Final 21 09 2023