Bengaluru 23°C

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಎನ್ ಆರ್ ಎಎಂ ಪಾಲಿಟೆಕ್ನಿಕ್ ಕಾಲೇಜಿಗೆ ದ್ವಿತೀಯ ಸ್ಥಾನ

ಮಂಗಳೂರು ನಗರದ ಕೆಪಿಟಿಯಲ್ಲಿ ಇತ್ತೀಚೆಗೆ ನಡೆದ 45ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಅಥ್ಲೆಟಿಕ್ ಕ್ರೀಡಾಕೂಟ 2025ರಲ್ಲಿ ನಿಟ್ಟೆಯ ಎನ್ ಆರ್ ಎಎಂ ಪಾಲಿಟೆಕ್ನಿಕ್ ಕಾಲೇಜು ಗಮನಾರ್ಹ ಯಶಸ್ಸನ್ನು ಗಳಿಸಿದೆ.

ಕಾರ್ಕಳ: ಮಂಗಳೂರು ನಗರದ ಕೆಪಿಟಿಯಲ್ಲಿ ಇತ್ತೀಚೆಗೆ ನಡೆದ 45ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಅಥ್ಲೆಟಿಕ್ ಕ್ರೀಡಾಕೂಟ 2025ರಲ್ಲಿ ನಿಟ್ಟೆಯ ಎನ್ ಆರ್ ಎಎಂ ಪಾಲಿಟೆಕ್ನಿಕ್ ಕಾಲೇಜು ಗಮನಾರ್ಹ ಯಶಸ್ಸನ್ನು ಗಳಿಸಿದೆ.


ವಿವಿಧ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸಂಸ್ಥೆಯು ಒಟ್ಟಾರೆ ಚಾಂಪಿಯನ್ ಶಿಪ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಗಳಿಸಿತು. ವೈಯಕ್ತಿಕ ಸಾಧನೆಗಳು ಪೈಕಿ : ಅಪೇಕ್ಷಾ (4 ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್) 100 ಮೀಟರ್ ಓಟದಲ್ಲಿ 3ನೇ ಸ್ಥಾನ, 400 ಮೀಟರ್ ಓಟದಲ್ಲಿ 2ನೇ ಸ್ಥಾನ ಹಾಗೂ 4×400 ಮೀಟರ್ ರಿಲೇಯಲ್ಲಿ 3ನೇ ಸ್ಥಾನ ಗಳಿಸಿರುತ್ತಾರೆ.


ಸ್ವಸ್ತಿ (4 ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್) ಲಾಂಗ್ ಜಂಪ್ ನಲ್ಲಿ 3ನೇ ಸ್ಥಾನ, ಹೈಜಂಪ್ ನಲ್ಲಿ 3ನೇ ಸ್ಥಾನ, ವರ್ಷಾ (2 ನೇ ಸೆಮಿಸ್ಟರ್ ಉಡುಪು ವಿನ್ಯಾಸ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ) 200 ಮೀಟರ್ ಓಟದಲ್ಲಿ 3ನೇ ಸ್ಥಾನ, 4×400 ಮೀಟರ್ ರಿಲೇಯಲ್ಲಿ 3ನೇ ಸ್ಥಾನ, ದೀಕ್ಷಾ (4 ನೇ ಸೆಮಿಸ್ಟರ್ ಉಡುಪು ವಿನ್ಯಾಸ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ) 200 ಮೀಟರ್ ಓಟದಲ್ಲಿ 3ನೇ ಸ್ಥಾನ, ಜಾವೆಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.


ರಿತಿಕ್ ಆರ್ ಪೂಜಾರಿ (2ನೇ ಸೆಮಿಸ್ಟರ್ ಮೆಕ್ಯಾನಿಕಲ್) 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, 800 ಮೀಟರ್ ಓಟದಲ್ಲಿ 2ನೇ ಸ್ಥಾನ ಹಾಗೂ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ವೈಯಕ್ತಿಕ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದರು. ರೋಹನ್ (4ನೇ ಸೆಮಿಸ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್) ಹೈಜಂಪ್ ನಲ್ಲಿ ಪ್ರಥಮ ಸ್ಥಾನ, ಸೃಜನ್ ಸುವರ್ಣ (6ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್),


ದೀಕ್ಷಿತ್ ಆಚಾರ್ಯ (2ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್) ಟೇಬಲ್ ಟೆನಿಸ್ ಡಬಲ್ಸ್ ನಲ್ಲಿ ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜು ಆಡಳಿತ ಮಂಡಳಿ, ಭೋದಕ ಹಾಗೂ ಭೋದಕೇತರ ವರ್ಗ ಪ್ರಶಂಸಿಸಿದೆ.


Nk Channel Final 21 09 2023