Bengaluru 27°C

ಪ್ಯಾರಿಸ್ ಒಲಿಂಪಿಕ್ಸ್​​​: ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ 2ನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಆದರೆ ಭಾರತಕ್ಕೆ ಲಭಿಸಬೇಕಿದ್ದ ಚಿನ್ನದ ಪದಕ ಈ ಬಾರಿ ಮಿಸ್ ಆಗಿದೆ.

ಭಾರತದ ಗೋಲ್ಡನ್‌ ಬಾಯ್‌ ಜಾವೆಲಿನ್‌ ಸ್ಟಾರ್‌ ನೀರಜ್‌ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆದರೆ ಭಾರತಕ್ಕೆ ಪ್ರಸಕ್ತ ಕ್ರೀಡಾಕೂಟದಲ್ಲಿ ಮೊದಲ ಬೆಳ್ಳಿ ಪದಕವನ್ನು ತಂದು ಕೊಟ್ಟಿದ್ದಾರೆ.

ನೀರಜ್, ಆರು ಪ್ರಯತ್ನಗಳಲ್ಲಿ ಎರಡನೇ ಎಸೆತ ಅತ್ಯುತ್ತಮವಾಗಿತ್ತು. ಅವರ ಮೊದಲ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳು ಫೌಲ್ ಆದವು. ಇನ್ನೂ ನೀರಜ್ ಪ್ರಯತ್ನಕ್ಕೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ನೀರಜ್ ಚೋಪ್ರಾ ಯಾವತ್ತಿದ್ರು ಭಾರತದ ಚಿನ್ನದ ಹುಡುಗ. ಕೈಯಲ್ಲಿ ಜಾವಲೀನ್ ಹಿಡಿದು ಓಡಿ ಬಂದು ಗುರಿಯತ್ತ ಎಸೆದರೇ, ಗಾಳಿಯಲ್ಲಿ ಮಿಂಚಿನ ವೇಗದಲ್ಲಿ ಸಾಗುವ ಆ ಭರ್ಚಿ ಚಿನ್ನಕ್ಕೆ ಮುತ್ತಿಡದೇ ಇರುವುದಿಲ್ಲ. ಆದರೆ ಈ ಬಾರಿ ಮಾತ್ರ ನಿರೀಕ್ಷೆ ಕೊಂಚ ಹುಸಿಗೊಳಿಸಿದೆ. ಸತತ ಪ್ರಯತ್ನ ಮಾಡಿದರೂ ಚಿನ್ನಕ್ಕೆ ಗುರಿ ಮುಟ್ಟಲಾಗದೆ ನೀರಜ್​ ಬೆಳ್ಳಿ ಗೆದ್ದಿದ್ದಾರೆ.

Nk Channel Final 21 09 2023