ಪ್ಯಾರಿಸ್: ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ 89.94 ಮೀಟರ್ ಎಸೆದಿದ್ದಾರೆ. ಇನ್ನೀದು ಜಾಗತಿಕ ಚಾಂಪಿಯನ್ಶಿಪ್ನಲ್ಲಿ ನೀರಜ್ ಅವರ ಅತ್ಯುತ್ತಮ ಎಸೆತವಾಗಿದೆ.
ಇನ್ನು ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಅರ್ಹತೆ ಪಡೆದಿದ್ದಾರೆ. ನೀರಜ್ ಚೋಪ್ರಾ ಅವರ ಸಾಧನೆಗೆ ಕೋಟ್ಯಾಂತರ ಭಾರತೀಯರು ಶುಭಾಶಯಗಳ ಸುರಿಮಳೆಗೈದಿದ್ದಾರೆ. ಪ್ಯಾರಿಸ್‌ನಲ್ಲಿ ಇದೇ ಆಗಸ್ಟ್ 8ರಂದು ಜಾವಲಿನ್ ಫೈನಲ್ ಪಂದ್ಯ ನಡೆಯಲಿದೆ. ನೀರಜ್ ಚೋಪ್ರಾ ಅವರು ಕಳೆದ ಬಾರಿಯಂತೆ ಈ ಬಾರಿಯೂ ಚಿನ್ನದ ಪದಕ ಗೆದ್ದು ಬರಲಿ ಅನ್ನೋ ಶುಭ ಹಾರೈಕೆ ಜೋರಾಗಿದೆ.