ಮಂಗಳೂರು: ಭಾರತೀಯ ಶಾಲಾ ಕ್ರೀಡೆಗಳ ಒಕ್ಕೂಟದ ವತಿಯಿಂದ ಮಧ್ಯ ಪ್ರದೇಶದ ನರ್ಮದಾಪುರದಲ್ಲಿ ನಡೆದ 68ನೇ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಸಿಯಸ್ ಶಾಲೆ, ಉವಾ೯ ಇದರ 10 ನೇ ತರಗತಿ ವಿದ್ಯಾಥಿ೯ ಆದಿತ್ಯ ಪಿ. ಟಲೇಕರ್ ಅವರು 17 ರ ಒಳಗಿನ ಕನಾ೯ಟಕ ತಂಡದ ನಾಯಕನಾಗಿ ಪ್ರತಿನಿಧಿಸಿದ್ದರು.
Ad
ನವೆಂಬರ್ 17 ರಿಂದ 20 ರವರೆಗೆ ಕ್ರೀಡಾಕೂಟ ನಡೆಯಿತು. ಇವರು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಂಧ್ಯಾ ಅವರ ಪುತ್ರ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಚೆಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆದಿತ್ಯ ತರಬೇತಿ ಪಡೆಯುತ್ತಿದ್ದಾರೆ.
Ad
Ad