Bengaluru 27°C

ಸ್ಟೀಪಲ್‌ಚೇಸ್‌ ಭಾರತೀಯನ ಸಾಧನೆ : ಫೈನಲ್‌ಗೆ ಲಗ್ಗೆ ಇಟ್ಟ ಮುಕುಂದ್‌ ಸಾಬ್ಲೆ

ಅಥ್ಲೀಟ್‌ ಅವಿನಾಶ್‌ ಮುಕುಂದ್‌ ಸಾಬ್ಲೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ 3,000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯ ಫೈನಲ್‌ ತಲುಪಿದ ಮೊದಲ ಭಾರತೀಯನೆಂಬುದು ಇವರ ಹೆಗ್ಗಳಿಕೆ.

ಪ್ಯಾರಿಸ್‌: ಅಥ್ಲೀಟ್‌ ಅವಿನಾಶ್‌ ಮುಕುಂದ್‌ ಸಾಬ್ಲೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ 3,000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯ ಫೈನಲ್‌ ತಲುಪಿದ ಮೊದಲ ಭಾರತೀಯನೆಂಬುದು ಇವರ ಹೆಗ್ಗಳಿಕೆ.


ಸೋಮವಾರ ರಾತ್ರಿ ಸೇಂಟ್‌-ಡೆನಿಸ್‌ನಲ್ಲಿ ನಡೆದ 2ನೇ ವಿಭಾಗದ ಹೀಟ್‌ನಲ್ಲಿ ಸಾಬ್ಲೆ 5ನೇ ಸ್ಥಾನಿಯಾದರು. ಅವರು 8:15.43 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿದರು. ಆದರೆ ಇದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಗಿಂತ ಕೆಳ ಮಟ್ಟದ ಸಾಧನೆ. ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಅವರು 8.09.91 ನಿಮಿಷಗಳ ಸಾಧನೆಗೈದದ್ದು ದಾಖಲೆಯಾಗಿದೆ.
ಮೊದಲ 1,000 ಮೀ. ವೇಳೆ ಅವಿನಾಶ್‌ ಸಾಬ್ಲೆ, ಕಿಬಿವೋಟ್‌ ಅವರಿಗೆ ಬಲವಾದ ಸ್ಪರ್ಧೆಯೊಡ್ಡಿದರು. ಇದು 3 ವಿಭಾಗಗಳ ಹೀಟ್‌ ಸ್ಪರ್ಧೆಯಾಗಿದ್ದು, ಪ್ರತೀ ಹೀಟ್‌ನಲ್ಲಿ ಮೊದಲ 5 ಸ್ಥಾನ ಪಡೆದವರು ಫೈನಲ್‌ಗೆ ಆಯ್ಕೆಯಾಗುತ್ತಾರೆ. ಗುರುವಾರ ಫೈನಲ್‌ ನಡೆಯಲಿದೆ.
Nk Channel Final 21 09 2023