Bengaluru 22°C
Ad

ʼಸದ್ಯದ ಮಟ್ಟಿಗೆ, ನನ್ನ ಪಾಲಿಗೆ ನಾನಾಡುತ್ತಿರುವ ಕೊನೆಯ ಕ್ಲಬ್ ಇದಾಗಿರಲಿದೆʼ ಎಂದು ನಿವೃತ್ತಿಯ ಸುಳಿವು ನೀಡಿದ ಮೆಸ್ಸಿ

ಅರ್ಜೆಂಟೀನಾ ತಂಡದ ನಾಯಕ, ಇಂಟರ್​ ಮಿಯಾಮಿ ತಂಡದ ಆಟಗಾರ ಲಿಯೋನೆಲ್​ ಮೆಸ್ಸಿ, ಅವರು ಮತ್ತೆ ನಿವೃತ್ತಿಯ ಸುಳಿವು ನೀಡಿದ್ದಾರೆ. ಮುಂದಿನ ವರ್ಷ ಇಂಟರ್​ ಮಿಯಾಮಿಯೊಂದಿಗಿನ ಒಪ್ಪಂದ ಮುಗಿಯುತ್ತಿದ್ದಂತೆ ಫುಟ್ಬಾಲ್​ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ದುಬೈ: ಅರ್ಜೆಂಟೀನಾ ತಂಡದ ನಾಯಕ, ಇಂಟರ್​ ಮಿಯಾಮಿ ತಂಡದ ಆಟಗಾರ ಲಿಯೋನೆಲ್​ ಮೆಸ್ಸಿ, ಅವರು ಮತ್ತೆ ನಿವೃತ್ತಿಯ ಸುಳಿವು ನೀಡಿದ್ದಾರೆ. ಮುಂದಿನ ವರ್ಷ ಇಂಟರ್​ ಮಿಯಾಮಿಯೊಂದಿಗಿನ ಒಪ್ಪಂದ ಮುಗಿಯುತ್ತಿದ್ದಂತೆ ಫುಟ್ಬಾಲ್​ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

Ad
300x250 2

“ಸದ್ಯದ ಮಟ್ಟಿಗೆ, ನನ್ನ ಪಾಲಿಗೆ ನಾನಾಡುತ್ತಿರುವ ಕೊನೆಯ ಕ್ಲಬ್ ಇದಾಗಿರಲಿದೆ” ಎಂದು ಹೇಳುವ ಮೂಲಕ ಮೆಸ್ಸಿ ತಮ್ಮ ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇದೇ ಜೂನ್​ ಜೂನ್ 24ರಂದು ಮೆಸ್ಸಿ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಕತಾರ್​ ಫಿಫಾ ವಿಶ್ವಕಪ್ ಬಳಿಕ ನಿವೃತ್ತಿ ನೀಡುವುದಾಗಿ ಮೆಸ್ಸಿ ಘೋಷಿಸಿದ್ದರು. ಆದರೆ ವಿಶ್ವ ಕಪ್​ ಗೆದ್ದ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಸದ್ಯ ನಿವೃತ್ತಿಯಾಗುವ ಯೋಚನೆ ನನ್ನ ಮುಂದಿಲ್ಲ, ಆರ್ಜೆಂಟೀನಾ ಪರ ಒಬ್ಬ ಚಾಂಪಿಯನ್‌ ಆಟಗಾರನಂತೆ ಇನ್ನೂ ಆಟ ಮುಂದು ವರಿಸುವ ಯೋಚನೆ ನನ್ನ ಮುಂದಿದೆ ಎಂದು ಹೇಳಿದರು.

ವಿಶ್ವಕಪ್​ ಗೆದ್ದ ಬಳಿಕ ಮೆಸ್ಸಿ ಅವರು, “ಫುಟ್ಬಾಲ್​ ಆರಂಭಿಸಿದಾಗ ನಾನು ಈ ಮಟ್ಟದ ಸಾಧನೆ ತೋರುತ್ತೇನೆ ಎಂದು ಎಂದಿಗೂ ನಾನು ಊಹಿಸಿರಲಿಲ್ಲ. ಫುಟ್ಬಾಲ್​ ವೃತ್ತಿಜೀವನದಲ್ಲಿದ್ದ ಒಂದೇ ಕೊರಗು ವಿಶ್ವ ಕಪ್ ಗೆಲ್ಲುವುದಾಗಿತ್ತು. ಇದೂ ಕೂಡ ನೆರವೇರಿದೆ. ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿಯೂ ಕಪ್​ ಗೆದ್ದಿರುವ ನನಗೆ ಇನ್ನೇನು ಆಸೆಗಳು ಉಳಿದಿಲ್ಲ” ಎಂದು ಹೇಳಿದ್ದರು.

ಲಿಯೋನೆಲ್ ಮೆಸ್ಸಿ ಅವರಿಗೆ ಅರ್ಜೆಂಟೀನಾದ ಫುಟ್ಬಾಲ್ ಸಂಸ್ಥೆ (ಎಎಫ್​ಎ) ವಿಶೇಷ ಗೌರವ ಸೂಚಿಸಲು ನಿರ್ಧಾರವೊಂದನ್ನು ಕೈಗೊಂಡಿದೆ. ಮೆಸ್ಸಿ ವಿದಾಯದ ಬಳಿಕ ಅವರ ಜೆರ್ಸಿ ನಂ.10 ಕ್ಕೂ ನಿವೃತ್ತಿ ಘೋಷಿಸಲು ಮುಂದಾಗಿದೆ.

 

Ad
Ad
Nk Channel Final 21 09 2023
Ad