ಪ್ಯಾರಿಸ್ ಒಲಂಪಿಕ್ ನ ಶೂಟಿಂಗ್ ಸ್ಪರ್ಧೆಯಲ್ಲಿ ಕುತೂಹಲ ತರಿಸಿದ್ದ ಮನು ಭಾಕರ್ , ಇದೀಗ ಹ್ಯಾಟ್ರಿಕ್ ಪದಕ ಕನಸು ಭಗ್ನಗೊಂಡಿದೆ.ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆರಂಭದಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕಕ್ಕೆ ಕೊರೊಳೊಡ್ಡುವ ಅವಕಾಶವನ್ನು ತಪ್ಪಿಸಿಕೊಂಡರು.
ಫೈನಲ್ ಸುತ್ತಿನ ಆರಂಭದಲ್ಲಿ ಮುನ್ನಡೆ ಪಡೆದಿದ್ದ ಮನು, ಎಲಿಮಿನೇಷನ್ ಸುತ್ತಿನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಮೂರನೇ ಪದಕ ಗೆಲ್ಲುವ ಅವರ ಕನಸು ನುಚ್ಚು ನೂರಾಯಿತು.4ನೇ ಸ್ಥಾನಕ್ಕೆ ಕುಸಿದಿದ್ದು ತೀವ್ರ ನಿರಾಸೆಯನ್ನುಂಟು ಮಾಡಿದೆ. ಆದರೂ ಮನು ಭಾಕರ್ ಅವರ ಸಾಧನೆಗೆ ಹ್ಯಾಟ್ಸಾಫ್ ಅಂತ ಕೋಟ್ಯಾಂತರ ಭಾರತೀಯರು ಹೇಳುತ್ತಿದ್ದಾರೆ.
ಮಹಿಳಾ 25 ಮೀಟರ್ ಪಿಸ್ತೂಲ್ ಫೈನಲ್ ಸ್ಪರ್ಧೆಯ ಫಲಿತಾಂಶ:
ಜಿ ಯಾಂಗ್ (ಸೌತ್ ಕೊರಿಯ)- 37 ಅಂಕಗಳು
ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ (ಫ್ರಾನ್ಸ್)- 37 ಅಂಕಗಳು
ಮೇಜರ್ ವೆರೋನಿಕಾ (ಹಂಗೇರಿ)- 31 ಅಂಕಗಳು
ಮನು ಭಾಕರ್ (ಭಾರತ)- 28 ಅಂಕಗಳು
Ad