ಮಂಗಳೂರು: ಹಾಸನ ಸ್ವಿಮ್ಮರ್ಸ್ ಕ್ಲಬ್ ವತಿಯಿಂದ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ ಯೆನೆಪೊಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ೩೪ ಚಿನ್ನದ ಪದಕ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ನಿಹಾಲ್ ಎಮ್. ಪೂಜಾರಿ – ೨ ಚಿನ್ನ, ವಾಫೀ ಅಬ್ದುಲ್ ಹಕೀಂ – ೮ ಚಿನ್ನ, ಸಮಿತ್ ಐ ಕ್ಸೇವಿಯರ್ – ೮ ಚಿನ್ನ, ಎಮ್. ಅಬ್ದುಲ್ ಬಾಶಿತ್ – ೮ ಚಿನ್ನ, ಸಂಚಿತ್ – ೩ ಚಿನ್ನ ಹಾಗೂ ಎಮ್. ಅಬ್ದುಲ್ ಖಾದರ್ – ೫ ಚಿನ್ನದ ಪದಕ ಗಳಿಸಿದ್ದಾರೆ. ಅವರು ರಾಜೇಶ್ ಆ್ಯಂಟನಿ ಬೆಂಗ್ರೆ ಮತ್ತು ಯಶೋದಾ ಜಿ ಭಂಡಾರಿಯವರಿಂದ ಈಜು ತರಬೇತಿ ಪಡೆದಿರುತ್ತಾರೆ.
ಶಾಲಾ ಪ್ರಾಂಶುಪಾಲರಾದ ಉಜ್ವಲ್ ರೊಡ್ನಿ ಮಿನೇಜಸ್, ಶಾಲಾ ಕ್ಯಾಂಪಸ್ ನಿರ್ದೇಶಕಿ ಮಿಶ್ರಿಯಾ ಜಾವೆದ್, ಶಾಲಾ ಹಿರಿಯ ಹೆಚ್. ಆರ್. ಮತ್ತು ಶೈಕ್ಷಣಿಕ ವ್ಯವಸ್ಥಾಪಕರಾದ- ಜೊಶ್ಲಿನ್ ಮಥಾಯಸ್ ಲುವಿಸ್ ಹಾಗೂ ಶಾಲಾ ಕ್ಯಾಂಪಸ್ ಸಂಯೋಜಕರಾದ ಇವೆಟ್ ಪಿರೇರಾ ವಿಜೇತರನ್ನು ಅಭಿನಂದಿಸಿದ್ದಾರೆ.