ಮೈಸೂರು: ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ವರುಣಾ ಕ್ಷೇತ್ರಕ್ಕೆ ಸೇರುವ ನಾಡನಹಳ್ಳಿ ಗ್ರಾಮದ ಪ್ರತಿಭಾನ್ವಿತೆ ಎಂ.ಎಲ್ ಚೈತ್ರರವರು ಮಿಂಚಿ ಎರಡನೇ ಸ್ಥಾನ ಪಡೆದಿದ್ದಾರೆ.
ವರುಣಾ ಕ್ಷೇತ್ರಕ್ಕೆ ಸೇರುವ ನಾಡನಹಳ್ಳಿ ಗ್ರಾಮದ ಎಂ.ಕೆ.ಲಿಂಗರಾಜು, ಎಸ್.ಜಿ.ಕುಸುಮ ಅವ ಪುತ್ರಿ ಎಂ.ಎಲ್. ಚೈತ್ರ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಮಿಂಚುತ್ತಿರುವ ಪ್ರತಿಭೆಯಾಗಿದ್ದು, ಬೆಂಗಳೂರಿನಲ್ಲಿ ನಡೆದ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ 10 ಮೀಟರ್ ಏರ್‌ಪಿಸ್ತೂಲ್ ವಿಭಾಗದಲ್ಲಿ ಎಂ.ಎಲ್.ಚೈತ್ರ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಚೆನ್ನೈನಲ್ಲಿ ನಡೆದ ದಕ್ಷಿಣ ವಲಯದ ರಾಷ್ಟ್ರಮಟ್ಟದ ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಅಖಿಲ ಭಾರತ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ಆರು ರಾಜ್ಯಗಳ ನಡುವಿನ ಸ್ಪರ್ಧೆಯಲ್ಲಿ ಚೈತ್ರ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ, ಹಾಗೆಯೇ ಸೀನಿಯರ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಇದಲ್ಲದೇ ದಕ್ಷಿಣ ವಲಯದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚೈತ್ರ ಪ್ರಥಮ ಸ್ಥಾನವನ್ನು ಹಾಗೂ ರಾಜ್ಯಮಟ್ಟದಲ್ಲಿನ ಏರ್‌ಪಿಸ್ತೂಲ್ ಶೂಟಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿ ಮೈಸೂರಿಗೆ ಕೀರ್ತಿ ತಂದಿದ್ದಾರೆ.