Ad

ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ ಜಾನ್ ಸೀನ

John

ಟೊರಾಂಟೊ: 16 ಬಾರಿಯ ವಿಶ್ವ ಚಾಂಪಿಯನ್, ಡಬ್ಲ್ಯೂ ಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ವಿದಾಯ ಘೋಷಿಸಿದರು. 2025ರಲ್ಲಿ ರಿಂಗ್ ನಲ್ಲಿ ತನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಜಾನ್ ಸೀನ ಹೇಳಿದ್ದಾರೆ.

Ad
300x250 2

ಟೊರಾಂಟೊದಲ್ಲಿ ನಡೆದ ಮನಿ ಇನ್ ದಿ ಬ್ಯಾಂಕ್ ಲೈವ್ ಕಾರ್ಯಕ್ರಮದಲ್ಲಿ ಅಚ್ಚರಿಯ ಎಂಟ್ರಿ ಕೊಟ್ಟ ಜಾನ್ ಸೀನ ತನ್ನ ನಿರ್ಧಾರ ಪ್ರಟಿಸಿ ಅಭಿಮಾನಿ ವರ್ಗಕ್ಕೆ ಶಾಕ್ ನೀಡಿದರು. ಸೀನ ಧರಿಸಿದ್ದ ಟಿ ಶರ್ಟ್ ನಲ್ಲಿ ‘ ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದಿತ್ತು.

ಸೆನಾ ಕಂಪನಿಯಿಂದ ನಿವೃತ್ತಿ ಘೋಷಿಸುವ ಮೊದಲು, ಟೊರೊಂಟೊದಲ್ಲಿ ಪ್ರೇಕ್ಷಕರಿಗೆ WWE ಹಾಲ್ ಆಫ್ ಫೇಮರ್ ಟ್ರಿಶ್ ಸ್ಟ್ರಾಟಸ್ ಪರಿಚಯಿಸಿದರು. 16 ಬಾರಿಯ ವಿಶ್ವ ಚಾಂಪಿಯನ್ ಜಾನ್ ಸೀನ ರಸಲ್‌ ಮೇನಿಯಾ 41 ದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ.

‘ಇಂದು ರಾತ್ರಿ, ನಾನು ಡಬ್ಲ್ಯೂ ಡಬ್ಲ್ಯೂಇ ನಿಂದ ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ’ ಎಂದು ರಿಂಗ್‌ನೊಳಗೆ ಸೀನಾ ಹೇಳಿದರು.

Ad
Ad
Nk Channel Final 21 09 2023
Ad