ನವದೆಹಲಿ: ಐಪಿಎಲ್ 2023 ರ ಅಧಿಕೃತ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಜಿಯೋ ಸಿನಿಮಾ ಐಪಿಎಲ್ ವೀಕ್ಷಕರ ಸಂಖ್ಯೆಯಲ್ಲಿ ಹೊಸ ಸ್ಟ್ರೀಮಿಂಗ್ ದಾಖಲೆ ಮಾಡಿದೆ.
ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ವರದಿಯ ಪ್ರಕಾರ, ಪ್ರತಿ ಐಪಿಎಲ್ ಪಂದ್ಯಕ್ಕೆ ಜಿಯೋಸಿನಿಮಾದಲ್ಲಿ ಸರಾಸರಿ ಬಳಕೆದಾರರ ಸಮಯ 60 ನಿಮಿಷಗಳನ್ನು ಮೀರಿದೆ. ಜಿಯೋ ಸಿನಿಮಾ ಸಂಸ್ಥೆ ಟೂರ್ನಮೆಂಟ್ನ ಮೊದಲ ಐದು ವಾರಗಳಲ್ಲಿ 1300 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಗಳಿಸಿದೆ ಎಂದು ಘೋಷಿಸಿದೆ.
ಕಳೆದ ವಾರ, ಐಪಿಎಲ್ ಋತುವಿನಲ್ಲಿ ಟಿವಿ (ಸಿಟಿವಿ) ಜಾಹೀರಾತು ಹೆಚ್ಚಿದೆ ಎಂದು ಟಿಎಎಂ ವರದಿ ಬಹಿರಂಗ ಪಡಿಸಿದೆ. ಐಪಿಎಲ್ನ ಡಿಜಿಟಲ್ ಸ್ಟ್ರೀಮಿಂಗ್ ಸಮಯದಲ್ಲಿ ಪ್ರಾಯೋಜಕರ ಸಂಖ್ಯೆ 25 ತಲುಪಿದೆ.