ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ೨ನೇ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜನಿಟ ವೆಲಿಕ ಡಿಸೋಜ ಅವರು ಕರ್ನಾಟಕ ರೋಲರ್ ಸ್ಕೇಟಿಂಗ್ ಸಂಸ್ಥೆಯು ಆಯೋಜಿಸಿದ ರಾಜ್ಯ ಮಟ್ಟದ 40ನೇ ಕರ್ನಾಟಕ ಚಾಂಪಿಯನ್ ಶಿಪ್ ಮತ್ತು ಸಿಲೆಕ್ಸನ್ ಟ್ರಯಲ್ಸ್ 2024-2025 ಸ್ಪರ್ಧೆಯಲ್ಲಿ ಉಡುಪಿಯ ಕೋಸ್ಟಲ್ ರೋಲರ್ ಸ್ಕೇಟಿಂಗ್ ಕ್ಲಬ್ ನ್ನು ಪ್ರತಿನಿಧಿಸಿ ಭಾಗವಹಿಸಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗಳಿಸಿದ್ದಾರೆ.
Ad
ಈ ಸ್ಪರ್ಧೆಯು ನವೆಂಬರ್ 7 ರಿಂದ ನವೆಂಬರ್ 10 ರವರೆಗೆ ಮೈಸೂರಿನಲ್ಲಿ ಜರುಗಿತು. ಇವರು ಉಡುಪಿಯ ಆಗ್ನೆಲ್ಲೊ ಡಿಸೋಜ ಹಾಗೂ ಶ್ರೀಮತಿ ಜೆಸಿಂತಾ ರೋಜ್ ಡಿಸೋಜರವರ ಪುತ್ರಿ ಆಗಿರುತ್ತಾರೆ. ಶ್ರೀ ಮನೀಶ್ ಬಂಗೇರ ಮತ್ತು ಶ್ರೀ ಕಿಶೋರ್ ಕುಮಾರ್ ಇವರಿಗೆ ಮಾರ್ಗದರ್ಶನ ನೀಡಿರುತ್ತಾರೆ. 17 ರ ಮೇಲಿನ ವಯೋಮಾನದ ಸ್ಪೀಡ್ ಕ್ವಾಡ್ ಮಹಿಳೆಯರ ವರ್ಗದಲ್ಲಿ ಇವರ ಈ ಸಾಧನೆಯಿಂದ ಜನಿಟ ಅವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Ad
Ad