ಭಾರತ ಮೂಲದ ಐರ್ಲೆಂಡ್ ತಂಡದ ಕ್ರಿಕೆಟಿಗ ಸಿಮರ್ಜಿತ್ ಸಿಂಗ್ ಲಿವರ್ ಫೆಲ್ಯೂರ್ ಸಮಸ್ಯೆಗೆ ತುತ್ತಾಗಿದ್ದು, ಹರ್ಯಾಣದ ಗುರುಗ್ರಾಮ್ದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲತಃ ಪಂಜಾಬ್ನ ಸಿಮರ್ಜಿತ್ ಸಿಂಗ್ ಭಾರತದಲ್ಲಿ ಅವಕಾಶ ಸಿಗದ ಕಾರಣ ಐರ್ಲೆಂಡ್ಗೆ ವಲಸೆ ಹೋಗಿದ್ದರು. ಐರ್ಲೆಂಡ್ ಪರ 35 ಏಕದಿನ, 53 ಟಿ20 ಪಂದ್ಯಗಳನ್ನ ಸಿಮರ್ಜಿತ್ ಸಿಂಗ್ ಆಡಿದ್ದಾರೆ. ಐರ್ಲೆಂಡ್ ಅಗ್ರ ಆಲ್‌ರೌಂಡರ್ ಆಗಿದ್ದಾರೆ.
ಸುಮಾರು 7 ತಿಂಗಳ ಹಿಂದೆ ಅವರಿಗೆ ನಿಗೂಢವಾದ ಜ್ವರ ಕಾಣಿಸಿಕೊಂಡಿತ್ತು. ಐರ್ಲೆಂಡ್ನಲ್ಲಿ ಎಲ್ಲಾ ರೀತಿಯ ಪರೀಕ್ಷೆ ನಡೆಸಿದರೂ, ಜ್ವರಕ್ಕೆ ನಿಜವಾದ ಕಾರಣ ಪತ್ತೆ ಹಚ್ಚಲು ಆಗಿರಲಿಲ್ಲ. ಹೀಗಾಗಿ ಅವರ ಚಿಕಿತ್ಸೆಗೆ ವಿಳಂಬವಾಗಿದೆ.
Ad