Categories: ಕ್ರೀಡೆ

ಐಪಿಎಲ್: ಮುಂಬೈನ ಅಬ್ಬರದ ಆಟಕ್ಕೆ ನೆಲಕಚ್ಚಿದ ಆರ್ ಸಿಬಿ

ಮುಂಬೈ: ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕಳಪೆ ಬೌಲಿಂಗ್‌ಗೆ, ಕಳಪೆ ಫೀಲ್ಡಿಂಗ್‌ಗೆ ಮತ್ತೆ ಆರ್‌ಸಿಬಿ ಬೆಲೆ ತೆತ್ತಿದೆ.  ಆರ್​ಸಿಬಿ ನೀಡಿದ 196 ರನ್​ ಸವಾಲನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಓಪನಿಂಗ್​ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ಇಶನ್‌ ಕಿಶನ್‌,  34 ಎಸೆತದಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್​ ಬಾರಿಸಿ 69 ರನ್​ ಬಾರಿಸಿದ್ದಾರೆ. ಆ ಮೂಲಕ ಅವರ ಸ್ಟ್ರೈಕ್​ ರೇಟ್​​ 202.94ಕ್ಕೇರಿದೆ.

ನಂತರ ಸೂರ್ಯಕುಮಾರ್‌ ಯಾದವ್‌ 19 ಎಸೆತಕ್ಕೆ 5 ಬೌಂಡರಿ ಮತ್ತು 4 ಸಿಕ್ಸ್​ ಹೊಡೆಯುವ ಮೂಲಕ 52 ರನ್​ ಬಾರಿಸಿದ್ದಾರೆ. ಅವರ ಸ್ಫೋಟಕ ಅರ್ಧಶತಕದ ಆಟ ಅಭಿಮಾನಿಗಳ ಸಂಸತಕ್ಕೆ ಕಾರಣರಾಗಿದ್ದಾರೆ.

ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಆರ್‌ಸಿಬಿ ಪರ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದರು. ನಾಯಕ ಫಾ ಡುಪ್ಲೆಸಿಸ್‌ 61 ರನ್‌(40 ಎಸೆತ, 4 ಬೌಂಡರಿ, 3 ಸಿಕ್ಸರ್‌), ರಜತ್‌ ಪಟೀದಾರ್‌ 50 ರನ್‌ (26 ಎಸೆತ, 3 ಬೌಂಡರಿ, 4 ಸಿಕ್ಸರ್‌), ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌  ಸ್ಫೋಟಕ 53 ರನ್‌(23 ಎಸೆತ, 5 ಬೌಂಡರಿ, 4 ಸಿಕ್ಸರ್‌) ಆಟದಿಂದ 8 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.

ಜಸ್‌ಪ್ರೀತ್‌ ಬುಮ್ರಾ 21 ರನ್‌ ನೀಡಿ 5 ವಿಕೆಟ್‌ ಕೀಳುವ ಮೂಲಕ ಆರ್‌ಸಿಬಿ ಬೆನ್ನೆಲುಬನ್ನು ಮುರಿದರು. 4 ಎಸೆತ ಎದುರಿಸಿದ ಮ್ಯಾಕ್ಸ್‌ ವೆಲ್‌ ಶೂನ್ಯ ಸುತ್ತಿ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಗೆಲ್ಲಲು 197 ರನ್‌ಗಳ ಗುರಿಯನ್ನು ಪಡೆದ ಮುಂಬೈ 15.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ಈ ಮೂಲಕ ಮೂರು ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಎರಡನೇ ಜಯ ಸಾಧಿಸಿತು.

Ashika S

Recent Posts

ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಬರ್ಬರ ಕೊಲೆ

ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಮಹಾಂತೇಶ ನಗರದ ಬ್ರಿಡ್ಜ್ ಬಳಿ ನಡೆದಿದೆ.

9 mins ago

ಫಾದರ್ ಮುಲ್ಲರ್ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ

ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ (ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಒಂದು ಘಟಕ ) ನ ಪ್ರಸೂತಿ ಮತ್ತು…

21 mins ago

ಕೊಡಗಿನಲ್ಲಿ ಹೊಸ ಪ್ರಭೇದದ ಅಪರೂಪದ ಜೇಡ ಪತ್ತೆ…!

ಹಾಸನದ ಪರಿಸರ ಮಾರ್ಗದರ್ಶಿ ದಿವ್ಯಶ್ರೀ ಅವರ ತಂಡವು ಕೈಗೊಂಡಿದ್ದ ಅಧ್ಯಯನದ ವೇಳೆ ಕೊಡಗು ಜಿಲ್ಲೆಯ ಗರ್ವಾಲೆ ಎಂಬಲ್ಲಿ ಹೊಸ ಪ್ರಭೇದದ…

38 mins ago

ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಸಚಿವ ಅಮಿತ್​​ ಶಾ

ರಾಮ ಮಂದಿರವಾಯಿತು. ಇನ್ನು ಸೀತಾ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ. ಬಿಹಾರದ…

44 mins ago

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ನಾಮಪತ್ರ ಸಲ್ಲಿಕೆ

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು.

53 mins ago

ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ರಘುಪತಿ ಭಟ್ ನಾಮಪತ್ರ ಸಲ್ಲಿಕೆ

ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್ ಅವರು ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ…

1 hour ago