ಪ್ಯಾರಿಸ್: ಭಾರತಕ್ಕೆ ಮತ್ತೊಂದು ಆಘಾತವಾಗಿದೆ. ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಹಿಳೆಯರ 50 ಕೆಜಿ ವಿಭಾಗದಿಂದ ಅನರ್ಹಗೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಕುಸ್ತಿಪಟು ಒಲಿಂಪಕ್ನಿಂದ ಹೊರಗೆ ಕಳಿಸಿದೆ. ಭಾರತದ ಪ್ರಮುಖ ಕುಸ್ತಿಪಟು ಅಂತಿಮ್ ಫಂಘಾಲ್ ಅವರನ್ನು ಅಶಿಸ್ತಿನ ಕಾರಣದಿಂದ ಪಂದ್ಯದಿಂದ ದೂರು ಇಡಲಾಗಿದೆ. ಈಗಾಗಲೇ ಪ್ಯಾರಿಸ್ ಒಲಿಂಪಿಕ್ ಅಸೋಸಿಯೇಷನ್ ಪ್ಯಾರಿಸ್ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ.
ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಆಂಟಿಮ್ ಪಂಘಲ್ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು. ಇನ್ನು ಅವರನ್ನು ಗಡಿಪಾರು ಮಾಡಲು ಕಾರಣವನ್ನು ಕೂಡ ಪ್ಯಾರಿಸ್ ಒಲಿಂಪಿಕ್ ಅಸೋಸಿಯೇಷನ್ ನೀಡಿದೆ. ಒಲಿಂಪಿಕ್ ಗೇಮ್ಸ್ ವಿಲೇಜ್ಗೆ ಪ್ರವೇಶಿಸಲು ಅಂತಿಮ್ ಫಂಘಾಲ್ ಅವರ ಅಧಿಕೃತ ಕಾರ್ಡ್ ಅನ್ನು ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದಾರೆ. ಇದು ಒಲಿಂಪಿಕ್ ಆಟಗಾರರಿಗೆ ಮಾತ್ರ ನೀಡಲಾಗುವುದು, ಇದನ್ನು ಆಟಗಾರರಲ್ಲದವರು ಬಳಸುವಂತಿಲ್ಲ, ಆದರೆ ಅಂತಿಮ್ ಫಂಘಾಲ್ ಸಹೋದರಿ ಇದನ್ನು ಬಳಸಿರುವುದಕ್ಕೆ ಅವರು ಒಲಿಂಪಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆಟದಿಂದ ಹೊರ ಹಾಕಲಾಗಿದೆ.