News Karnataka Kannada
Tuesday, April 30 2024
ಕ್ರೀಡೆ

ʻಶ್ರೀಲಂಕಾ ಕ್ರಿಕೆಟ್ ಮಂಡಳಿʼ ಮೇಲಿನ ನಿಷೇಧವನ್ನು ರದ್ದುಗೊಳಿಸಿದ ʻಐಸಿಸಿʼ

New Project 2024 01 29t064054.883
Photo Credit : News Kannada

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ನ ಅಮಾನತನ್ನು ಆದೆಶವನ್ನು ಐಸಿಸಿ ರದ್ದುಗೊಳಿಸಿದೆ. ದೇಶದ ಕ್ರಿಕೆಟ್ ಸಂಸ್ಥೆಯು ಇನ್ನು ಮುಂದೆ ಜಾಗತಿಕ ಸಂಸ್ಥೆಯ “ಸದಸ್ಯತ್ವದ ಬಾಧ್ಯತೆಗಳನ್ನು” ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ.

“ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಅಮಾನತುಗೊಳಿಸುವಿಕೆಯನ್ನು ತಕ್ಷಣದಿಂದಲೇ ರದ್ದುಗೊಳಿಸಿದೆ.  ಮಂಡಳಿಯು ಅಮಾನತುಗೊಂಡಾಗಿನಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ  “ಐಸಿಸಿ ಜನವರಿ 28 ರ ಭಾನುವಾರದಂದು ಹೇಳಿಕೆಯಲ್ಲಿ ತಿಳಿಸಿದೆ.

ತಮ್ಮ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸಲು ವಿಫಲವಾದ ಕಾರಣ ಮತ್ತು ಅವರ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕಾಗಿ ಕಳೆದ ವರ್ಷದ ನವೆಂಬರ್‌ ನಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡದ ಮೇಲೆ ಮೇಲೆ ವಿಧಿಸಲಾದ ನಿಷೇಧವನ್ನು ಐಸಿಸಿ ಹಿಂತೆಗೆದುಕೊಂಡಿದೆ.

ಶ್ರೀಲಂಕಾದ ಕ್ರೀಡಾ ಸಚಿವಾಲಯವು SLC ಮಂಡಳಿಯನ್ನು ವಜಾಗೊಳಿಸಿ ಮಧ್ಯಂತರ ಸಮಿತಿಯನ್ನು ನೇಮಿಸಿದ ನಂತರ ನವೆಂಬರ್ 10 ರಂದು ಸರ್ಕಾರದ ಹಸ್ತಕ್ಷೇಪದಿಂದಾಗಿ ಶ್ರೀಲಂಕಾದ ICC ಸದಸ್ಯತ್ವವನ್ನು ಅಮಾನತುಗೊಳಿಸಲಾಯಿತು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು